ಭದ್ರಾವತಿ ನಗರಸಭೆ ೧೪ನೇ ವಾರ್ಡ್‌ನ ಕಡು ಬಡವರಿಗೆ ನಗರಸಭೆ ಹಿರಿಯ ಸದಸ್ಯ ವಿ. ಕದಿರೇಶ್ ಮಂಗಳವಾರ ದಿನಸಿ ಸಾಮಗ್ರಿ ವಿತರಿಸಿದರು. ಕಾರ್ಯಕ್ರಮಕ್ಕೆ ತಹಸೀಲ್ದಾರ್ ಶಿವಕುಮಾರ್ ಚಾಲನೆ ನೀಡಿದರು.
ಭದ್ರಾವತಿ, ಮೇ. ೧೨: ಕೊರೋನಾ ವೈರಸ್ ಪರಿಣಾಮ ಲಾಕ್‌ಡೌನ್ ಜಾರಿಗೊಳಿಸಿದ ಹಿನ್ನಲೆಯಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ನಗರಸಭೆ ೧೪ನೇ ವಾರ್ಡ್‌ನ ಕಡು ಬಡವರಿಗೆ ನಗರಸಭೆ ಹಿರಿಯ ಸದಸ್ಯ ವಿ. ಕದಿರೇಶ್ ಮಂಗಳವಾರ ದಿನಸಿ ಸಾಮಗ್ರಿ ವಿತರಿಸಿದರು.ತಹಸೀಲ್ದಾರ್ ಶಿವಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರ ಸೇನಾ ವಿನಾಯಕ ಸೇವಾ ಸಮಿತಿ ಅಧ್ಯಕ್ಷರು ನಗರಸಭಾ ಸದಸ್ಯರಾಗಿರುವ ವಿ. ಕದಿರೇಶ್‌ರವರು ಈಗಾಗಲೇ ವಿನಾಯಕ ಸೇವಾ ಸಮಿತಿ ವತಿಯಿಂದ ಲಾಕ್‌ಡೌನ್ ಘೋಷಣೆಯಾದಾಗಿನಿಂದಲೂ ಪ್ರತಿದಿನ ಕಡು ಬಡವರು, ಕೂಲಿ ಕಾರ್ಮಿಕರು, ನಿರಾಶ್ರಿತರು, ಬೀದಿ ವಾಸಿಗಳು, ವಲಸೆ ಕಾರ್ಮಿಕರ ಸಂಕಷ್ಟಕ್ಕೆ ಸ್ಪಂದಿಸಿ ಅಡುಗೆ ತಯಾರಿಸಿ ಪೂರೈಕೆ ಮಾಡಿದ್ದರು.
ಇದೀಗ ಸ್ವಂತ ಖರ್ಚಿನಲ್ಲಿ ೧೪ನೇ ವಾರ್ಡಿನಲ್ಲಿರುವ ಕಡು ಬಡವರು, ಕೂಲಿಕಾರ್ಮಿಕರನ್ನು ಗುರುತಿಸಿ ದಿನಸಿ ಸಾಮಗ್ರಿ ವಿತರಿಸಿದರು. ಸಂಚಾರಿ ಪೊಲೀಸ್ ಠಾಣಾಧಿಕಾರಿ ಕವಿತಾ, ತಾಲೂಕು ಪಂಚಾಯಿತಿ ಸದಸ್ಯ ಕೆ. ಮಂಜುನಾಥ್, ಮುಖಂಡರಾದ ಮಂಗೋಟೆ ರುದ್ರೇಶ್, ಪ್ರಕಾಶ್, ವಸಂತರಾವ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment