ಜಿ. ಆನಂದಕುಮಾರ್
ಭದ್ರಾವತಿ: ರಾಜ್ಯದಲ್ಲಿ ಕಳೆದ ಸುಮಾರು ೪೦ ದಿನಗಳಿಂದ ಮದ್ಯ ಮಾರಾಟವಿಲ್ಲದ ಕಾರಣ ಸಾಕಷ್ಟು ಕುಟುಂಬಗಳು ನೆಮ್ಮದಿಯಿಂದ ದಿನ ಕಳೆದಿವೆ. ಇದೀಗ ಪುನಃ ಮದ್ಯ ಮಾರಾಟ ಆರಂಭವಾಗಿದ್ದು, ನೆಮ್ಮದಿ ಕಂಡಿದ್ದ ಕುಟುಂಬಗಳಲ್ಲಿ ಆತಂಕ ಎದುರಾಗಿದೆ. ಈ ಹಿನ್ನಲೆಯಲ್ಲಿ ಯಾವುದೇ ಕಾರಣಕ್ಕೂ ಪುನಃ ಮದ್ಯ ವ್ಯಸನಿಗಳಾಗದಂತೆ ಎಚ್ಚರ ವಹಿಸಿ ಸುಂದರ ಭವಿಷ್ಯ ರೂಪಿಸಿಕೊಳ್ಳುವ ಕಡೆ ಗಮನ ಹರಿಸಿ ಎಂದು ಅಖಲ ಕರ್ನಾಟಕ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಜಿ. ಆನಂದಕುಮಾರ್ ಮನವಿ ಮಾಡಿದ್ದಾರೆ.ಸುಮಾರು ೪೦ ದಿನಗಳ ವರೆಗೆ ಮದ್ಯ ಮಾರಾಟವಿಲ್ಲದ ಕಾರಣ ಕುಟುಂಬದಲ್ಲಿ ನೆಮ್ಮದಿ ಲಭಿಸಿದೆ ಎಂಬುದು ಶೇ.೮೯ರಷ್ಟು ಜನರ ಅಭಿಪ್ರಾಯವಾಗಿದೆ. ಕುಟುಂಬದಲ್ಲಿ ಆರೋಗ್ಯ ಸುಧಾರಿಸಿದೆ, ಖರ್ಚು ಕಡಿಮೆಯಾಗಿದೆ, ಯಾವುದೇ ಸಮಸ್ಯೆ ಎದುರಾಗಿಲ್ಲ. ಈ ನಡುವೆ ಪುನಃ ಮದ್ಯ ಮಾರಾಟ ಆರಂಭಗೊಂಡಿರುವುದು ದುರಾದುಷ್ಟಕರ ಬೆಳವಣಿಗೆಯಾಗಿದೆ. ಶಾಶ್ವತವಾಗಿ ಮದ್ಯಪಾನದಿಂದ ದೂರು ಉಳಿಯುವ ದೃಢ ಸಂಕಲ್ಪ ಕೈಗೊಳ್ಳಬೇಕಾಗಿದೆ. ಮದ್ಯ ಮುಕ್ತ ಸಮಾಜ ನಿರ್ಮಾಣ ಮಾಡಬೇಕಾಗಿದೆ. ಇದು ಮಹಾತ್ಮಗಾಂಧಿ ಅವರ ಕನಸು ಸಹ ಆಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗಡೆಯವರ ಆಶಯ ಸಹ ಆಗಿದೆ. ಈ ಹಿನ್ನಲೆಯಲ್ಲಿ ಪುನಃ ಮದ್ಯ ವ್ಯಸನಿಗಳಾಗಿದಿರಿ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
No comments:
Post a Comment