ಭದ್ರಾವತಿ ಹಳೇನಗರದ ಪತ್ರಿಕಾ ಭವನ ಬಳಿ ಇರುವ ಸವಿತಾ ಸಮಾಜದ ಸಹಕಾರ ಸಂಘದ
ಕಟ್ಟಡದ ಗೋಡೆ ಕಿಂಡಿ ಮಾಡಿ ಕಳ್ಳತನಕ್ಕೆ ಯತ್ನಿಸಿರುವುದು.
ಭದ್ರಾವತಿ, ಮೇ. ೧೩: ಹಳೇನಗರದ ಪತ್ರಿಕಾ ಭವನ ಬಳಿ ಇರುವ ಸವಿತಾ ಸಮಾಜದ ಸಹಕಾರ ಸಂಘದ ಕಟ್ಟಡದ ಗೋಡೆ ಕಿಂಡಿ ಮಾಡಿ ಕಳ್ಳತನಕ್ಕೆ ಯತ್ನಿಸಿರುವ ಘಟನೆ ನಡೆದಿದೆ.ಸಹಕಾರ ಸಂಘದಲ್ಲಿ ಏನಾದರೂ ಬೆಲೆ ಬಾಳುವ ಸ್ವತ್ತುಗಳು ಸಿಗಬಹುದೆಂಬ ನಿರೀಕ್ಷೆಯೊಂದಿಗೆ ಗೋಡೆ ಕಿಂಡಿ ಮಾಡಲಾಗಿದೆ. ಆದರೆ ಕಛೇರಿಯಲ್ಲಿರುವ ಸ್ವತ್ತುಗಳನ್ನು ಕಳವು ಮಾಡಿಲ್ಲ ಎನ್ನಲಾಗಿದೆ. ಈ ಸಂಬಂಧ ಹಳೇನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
No comments:
Post a Comment