ಭದ್ರಾವತಿ, ಜು. ೨೯: ನಗರಸಭೆ ವ್ಯಾಪ್ತಿಯ ಹಳೇನಗರ ಭಾಗದಲ್ಲಿ ಅಮೃತ್ ನಗರ ಯೋಜನೆಯಡಿ ರಾಜಕಾಲುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಇದರ ಜೊತೆಗೆ ಕಾಮಗಾರಿಗೆ ಅಡ್ಡಲಾಗಿರುವ ಬೀದಿ ದೀಪ ಕಂಬಗಳನ್ನು ಸ್ಥಳಾಂತರಿಸುವ ಕಾರ್ಯ ಸಹ ಕೈಗೊಳ್ಳಲಾಗುತ್ತಿದೆ. ಈ ಹಿನ್ನಲೆಯಲ್ಲಿ ಜು. ೩೦ ಮತ್ತು ೩೧ರಂದು ವಿದ್ಯುತ್ ವ್ಯತ್ಯಯವಾಗಲಿದೆ.
ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ೫.೩೦ರ ವರೆಗೆ ಹಳೇನಗರ ಭಾಗದ ಸಿದ್ದಾರೂಢ ನಗರ, ಶಂಕರ ಮಠ ರಸ್ತೆ, ಕನಕ ನಗರ, ಕೆಎಸ್‌ಆರ್‌ಟಿಸಿ ಬಸ್ ಘಟಕದ ಸುತ್ತಮುತ್ತ, ಸಿಲ್ವರ್ ಪಾರ್ಕ್, ಅಂಬೇಡ್ಕರ್ ನಗರ, ಕೋಟೆ ಏರಿಯಾ ೫ನೇ ಕ್ರಾಸ್, ಹೊಸ ಸೇತುವೆ ರಸ್ತೆ, ಕಾಳಿದಾಸ ಬಡಾವಣಿ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಸಾರ್ವಜನಿಕರು ಸಹಕರಿಸುವಂತೆ ನಗರಸಭೆ ಪೌರಾಯುಕ್ತ ಮನೋಹರ್ ಕೋರಿದ್ದಾರೆ.
No comments:
Post a Comment