ಭದ್ರಾವತಿ ನಗರಸಭೆ ವ್ಯಾಪ್ತಿಯ ವಿದ್ಯಾಮಂದಿರ ಸೀಲ್ ಡೌನ್ ಪ್ರದೇಶದಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ನಿವಾಸಿಗಳಿಗೆ ನಗರಸಬೆ ಹಿರಿಯ ಆರೋಗ್ಯ ನಿರೀಕ್ಷಕ ಆರ್.ಬಿ ಸತೀಶ್ ದಿನಸಿ ಸಾಮಗ್ರಿಗಳನ್ನು ವಿತರಿಸಿದರು. ಸಿಬ್ಬಂದಿ ಗೋವಿಂದ, ಮುಖಂಡ ಕಾಂತರಾಜ್ ಸೇರಿ ಇನ್ನಿತರರು ಉಪಸ್ಥಿತರಿದ್ದರು.
ಭದ್ರಾವತಿ, ಜು. ೧೫: ಕೊರೋನಾ ಸೋಂಕಿನ ಹಿನ್ನಲೆಯಲ್ಲಿ ಸೀಲ್ ಡೌನ್ ಘೋಷಿಸಲಾದ ಪ್ರದೇಶಗಳ ವ್ಯಾಪ್ತಿಯಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ನಿವಾಸಿಗಳಿಗೆ ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು.
ದಾನಿಗಳ ನೆರವಿನಿಂದ ಸೀಲ್‌ಡೌನ್ ಪ್ರದೇಶಗಳಾದ ಘೋಷಿತ ಕೊಳಚೆ ಪ್ರದೇಶ ಸುರಗಿತೋಪು, ವಿದ್ಯಾಮಂದಿರ ಹಾಗೂ ಕಡದಕಟ್ಟೆ ಸೇರಿದಂತೆ ಇನ್ನಿತರೆಡೆ ಅಗತ್ಯವಿರುವ ದಿನಸಿ ಸಾಮಗ್ರಿಗಳನ್ನು ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳು ವಿತರಿಸಿದರು. ನಗರಸಭೆ ವ್ಯಾಪ್ತಿಯಲ್ಲಿ ಸುಮಾರು ೧೦ಕ್ಕೂ ಅಧಿಕ ಸೀಲ್ ಡೌನ್ ಪ್ರದೇಶಗಳಿದ್ದು, ಆಯಾ ವ್ಯಾಪ್ತಿಯ ರಾಜಕೀಯ ಪಕ್ಷಗಳ ಪ್ರಮುಖರು, ದಾನಿಗಳು ನಿವಾಸಿಗಳ ಸಂಕಷ್ಟಗಳಿಗೆ ನಗರಸಭೆಯೊಂದಿಗೆ ಸ್ಪಂದಿಸುತ್ತಿದ್ದಾರೆ.
No comments:
Post a Comment