ಭದ್ರಾವತಿಯಲ್ಲಿ ಬಿಜೆಪಿ ಎಸ್.ಸಿ ಮೋರ್ಚಾವತಿಯಿಂದ ಮಂಗಳವಾರ ನಗರದ ವಿವಿಧೆಡೆ ಕಾರ್ಯಕರ್ತರ ಸಭೆಗಳಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ ಮೇಘರಾಜ್ ಸೇರಿದಂತೆ ಇನ್ನಿತರರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಭದ್ರಾವತಿ, ಆ. ೧೮: ಭಾರತೀಯ ಜನತಾ ಪಕ್ಷ ಎಸ್‌ಸಿ ಮೋರ್ಚಾ ನೂತನ ಪದಾಧಿಕಾರಿಗಳನ್ನು ತಾಲೂಕು ಮಂಡಲ ವತಿಯಿಂದ ನೇಮಕ ಮಾಡಲಾಗಿದೆ.
ಅಧ್ಯಕ್ಷರಾಗಿ ಪಿ. ಗಣೇಶ್‌ರಾವ್, ಉಪಾಧ್ಯಕ್ಷರಾಗಿ ಡಾ. ಪುಷ್ಪಲತಾ, ಸತ್ಯ, ಪ್ರಧಾನ ಕಾರ್ಯದರ್ಶಿಯಾಗಿ ರವಿಕುಮಾರ್, ಕಾರ್ಯದರ್ಶಿಯಾಗಿ ಮಾಲತೇಶ್, ನಾಗೇಶ್, ಖಜಾಂಚಿಯಾಗಿ ರವಿಕುಮಾರ್ ನಾಯ್ಕ, ಸದಸ್ಯರಾದ ರಾಜು, ಮುರುಳಿ, ಹನುಮಂತನಾಯ್ಕ, ರವಿಕುಮಾರ್ ನಾಯ್ಕ, ಅವಿನಾಶ್, ಗೋಪಾಲನಾಯ್ಕ, ಚಂದ್ರು, ಕುಮಾರ್ ಸ್ವಾಮಿ, ಮತ್ತು ಗಿರೀಶ್‌ನಾಯ್ಕ ನೇಮಕಗೊಂಡಿದ್ದಾರೆ.
ಎಸ್.ಸಿ ಮೋರ್ಚಾ ವತಿಯಿಂದ ಸನ್ಮಾನ, ಅಭಿನಂದನೆ:
ಎಸ್.ಸಿ ಮೋರ್ಚಾವತಿಯಿಂದ ಮಂಗಳವಾರ ನಗರದ ವಿವಿಧೆಡೆ ಕಾರ್ಯಕರ್ತರ ಸಭೆಗಳಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ ಮೇಘರಾಜ್‌ರವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಬಿ.ಕೆ ಶ್ರೀನಾಥ್, ಜಿ. ಧರ್ಮಪ್ರಸಾದ್, ಯುವ ಮುಖಂಡ ಜಿ.ಆರ್ ಪ್ರವೀಣ್ ಪಟೇಲ್, ತಾಲೂಕು ಮಂಡಲ ಅಧ್ಯಕ್ಷ ಎಂ. ಪ್ರಭಾಕರ್, ಶಿವರಾಜ್ ಸೇರಿದಂತೆ ಇನ್ನಿತರರನ್ನು ಸಹ ಮೋರ್ಚಾವತಿಯಿಂದ ಅಭಿನಂದಿಸಲಾಯಿತು.
No comments:
Post a Comment