ಭದ್ರಾವತಿ: ತಾಲ್ಲೂಕಿನ ಬಿ.ಆರ್.ಪಿ ಸಮೀಪದ ಸಿಂಗನ ಮನೆ ಗ್ರಾಮದಲ್ಲಿ ಮಾರುತಿ ಓಮ್ನಿ ವಾಹನ ಬೆಂಕಿಗಾಹುತಿಯಾಗಿರುವ ಘಟನೆ ಶುಕ್ರವಾರ ಸಂಜೆ ಸಂಭವಿಸಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಸಿಂಗನ ಮನೆ ಗ್ರಾಮದ ಸತೀಶ್ ಎಂಬುವರ ಮನೆಯ ಮುಂಭಾಗದಲ್ಲಿ ಮಾರುತಿ ಓಮ್ನಿ ವಾಹನಕ್ಕೆ ಸಿಲೆಂಡರ್ ಡಂಪ್ ಮಾಡುವಾಗ ಈ ದುರ್ಘಟನೆ ಸಂಭವಿಸಿದ್ದು, ಮಾರುತಿ ಓಮ್ನಿ ವಾಹನಕ್ಕೆ ಹತ್ತಿದ ಬೆಂಕಿಯ ಜ್ವಾಲೆ ಮನೆಯ ಕಿಟಕಿ ಹಾಗೂ ಟೈಲ್ಸ್ ಗಳನ್ನು ಆಹುತಿ ಪಡೆದಿದೆ.
ಅಗ್ನಿಶಾಮಕ ಠಾಣಾಧಿಕಾರಿ ಎನ್.ವಸಂತಕುಮಾರ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಕೆ.ಎಸ್.ರಮೇಶ್, ಸುರೇಶಾಚಾರ್, ಡಿ.ಎನ್.ಸುರೇಶ್ ಮತ್ತು ಎಂ.ಸಿ.ಮಹೇಂದ್ರ ರವರುಗಳು ಬೆಂಕಿ ನಿಂದಿಸುವ ಮೂಲಕ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.
ಘಟನೆ ಕುರಿತಂತೆ ಸ್ಥಳಕ್ಕೆ ಭೇಟಿ ನೀಡಿದ ಭದ್ರಾವತಿ ಗ್ರಾಮಾಂತರ ಠಾಣೆಯ ಪಿಎಸ್ಐ ದೆವರಾಜ್ ರವರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

No comments:
Post a Comment