ಭದ್ರಾವತಿಯಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮುಸ್ಲಿಂ ಸಮುದಾಯದ ಯುವಕರ ತಂಡ ಶುಕ್ರವಾರ ನಗರದ ವಿವಿಧೆಡೆ ಹಣ್ಣು-ಹಂಪಲು ವಿತರಿಸಿತು.
ಭದ್ರಾವತಿ, ಅ. ೩೦: ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮುಸ್ಲಿಂ ಸಮುದಾಯದ ಯುವಕರ ತಂಡ ಶುಕ್ರವಾರ ನಗರದ ವಿವಿಧೆಡೆ ಹಣ್ಣು-ಹಂಪಲು ವಿತರಿಸಿತು.
ನೌಜವಾನ್ ಕಮಿಟಿ ಪ್ರಮುಖರಾದ ಸೈಯದ್ ಫೈರೋಜ್, ನೂರು ಅಹಮದ್, ಖಲೀದ್ ರಜಾ, ಅದಿಲ್ ಮತ್ತು ರಹೀಮ್ ಸೇರಿದಂತೆ ಇನ್ನಿತರರನ್ನೊಳಗೊಂಡ ತಂಡ ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ, ನಿರ್ಮಲಾ ಆಸ್ಪತ್ರೆ ಒಳ ರೋಗಿಗಳಿಗೆ ಮತ್ತು ನ್ಯೂಟೌನ್ ಸಿದ್ಧಾರ್ಥ ಅಂಧರ ಕೇಂದ್ರದ ವಿಕಲಚೇತನರಿಗೆ ಹಣ್ಣು ಹಂಪಲುಗಳನ್ನು ವಿತರಿಸುವ ಮೂಲಕ ಹಬ್ಬದ ಶುಭಾಶಯ ಕೋರಿತು.
ಕೊರೋನಾ ಸೋಂಕಿನ ಹಿನ್ನಲೆಯಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಬಹುತೇಕ ಮುಸ್ಲಿಂ ಸಂಘಟನೆಗಳು ಸರಳವಾಗಿ ಹಬ್ಬವನ್ನು ಆಚರಿಸಿದವು. ಆಯಾ ಭಾಗದಲ್ಲಿರುವ ಮಸೀದಿಗಳಲ್ಲಿ ಗುರುವಾರ ರಾತ್ರಿ ಧರ್ಮಗುರುಗಳ ನೇತೃತ್ವದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.
ಬಹುತೇಕ ಮಸೀದಿಗಳ ಬಳಿ ಮೆಕ್ಕಾ ಮದೀನ ಮಾದರಿಗಳನ್ನು ನಿರ್ಮಿಸಲಾಗಿತ್ತು. ಮುಸ್ಲಿಂ ಸಮುದಾಯದವರು ಹೆಚ್ಚಾಗಿ ವಾಸಿಸುತ್ತಿರುವ ಪ್ರದೇಶಗಳಲ್ಲಿ ಈ ಬಾರಿ ಹಬ್ಬದ ಸಂಭ್ರಮ ಕ್ಷೀಣಿಸಿರುವುದು ಕಂಡು ಬಂದಿತು.
No comments:
Post a Comment