ಭದ್ರಾವತಿಯಲ್ಲಿ ನಾಯ್ಡು ಸಮಾಜದ ಸಮುದಾಯಭವನದ ಮುಂದುವರೆದ ಕಾಮಗಾರಿಗೆ ಶಾಸಕ ಬಿ.ಕೆ ಸಂಗಮೇಶ್ವರ್ ಭೂಮಿಪೂಜೆ ನೆರವೇರಿಸಿದರು.
ಭದ್ರಾವತಿ, ಅ. ೩೦: ನಗರದ ಬಿ.ಹೆಚ್ ರಸ್ತೆ ಗೌಳಿಗರ ಬೀದಿ ಶ್ರೀರಾಮ ಮಂದಿರ ಆವರಣದಲ್ಲಿ ನಾಯ್ಡು ಸಮಾಜದ ವತಿಯಿಂದ ನಿರ್ಮಿಸಲಾಗುತ್ತಿರುವ ಸಮುದಾಯ ಭವನದ ಮುಂದುವರೆದ ಕಾಮಗಾರಿಗೆ ಶಿವಮೊಗ್ಗ ಲೋಕಸಭಾ ಸದಸ್ಯರ ನಿಧಿsಯಿಂದ ರು. ೨೫ ಲಕ್ಷ ಬಿಡುಗಡೆಯಾಗಿದ್ದು, ಶಾಸಕ ಬಿ.ಕೆ. ಸಂಗಮೇಶ್ವರ್ ಭೂಮಿಪೂಜೆ ನೆರವೇರಿಸಿದರು.
ಬಿಜೆಪಿ ಪಕ್ಷದ ಮುಖಂಡರಾದ ವಿ. ಕದಿರೇಶ್, ಟಿ. ವೆಂಕಟೇಶ್, ಆನಂದ್, ಮಂಗೋಟೆ ರುದ್ರೇಶ್, ನಾಯ್ಡು ಸಮಾಜದ ಗೌರವಾಧ್ಯಕ್ಷರಾದ ಎಸ್. ಮೋಹನ್‌ನಾಯ್ಡು, ಅಧ್ಯಕ್ಷ ವಿ. ಗೋವಿಂದ್‌ರಾಜ್, ಕಾರ್ಯದರ್ಶಿ ಬಿ.ವಿ ಗಿರಿನಾಯ್ಡು, ಉಪಾಧ್ಯಕ್ಷರಾದ ಪ್ರಭಾಕರ್. ಖಜಾಂಚಿ ಇಂದು ಶೇಖರ್, ಮೋಹನ್, ಜಯಕುಮಾರ್, ಚಲುವರಾಜ್, ವಾಸು, ಪಿ.ಎಸ್ ಬಾಬು, ಮುನಿಸ್ವಾಮಿ, ಬಾಲಚಂದ್ರ ಮುಂತಾದವರು ಉಪಸ್ಥಿತರಿದ್ದರು.
No comments:
Post a Comment