ಪಿಂಚಣಿ ಸೇರಿದಂತೆ ಸರ್ಕಾರಿ ಸೌಲಭ್ಯಗಳಿಗೆ ಮನವಿ : ತಾಲೂಕು ಆಡಳಿತ ಸ್ಪಂದನೆ
ಹಾಸಿಗೆ ಹಿಡಿದಿರುವ ಭದ್ರಾವತಿ ತಾಲ್ಲೂಕಿನ ಹೊಳೆಗಂಗೂರು ಗ್ರಾಮದ ಸುಮಾರು ೩೬ ವರ್ಷದ ವಿಕಲಚೇತನ ಯುವತಿ.
ಭದ್ರಾವತಿ, ಅ. ೨೭: ತಾಲ್ಲೂಕಿನ ಹೊಳೆಗಂಗೂರು ಗ್ರಾಮದ ಸುಮಾರು ೩೬ ವರ್ಷದ ವಿಕಲಚೇತನ ಯುವತಿಗೆ ಇದುವರೆಗೂ ಸರ್ಕಾರದ ಯಾವುದೇ ಪಿಂಚಣಿ ಸೌಲಭ್ಯ ಲಭಿಸಿಲ್ಲ. ಓಡಾಡುವುದಕ್ಕೂ ಅಸಾಧ್ಯವಾಗಿ ಹಾಸಿಗೆ ಹಿಡಿದಿರುವ ಯುವತಿಯ ನೆರವಿಗೆ ತಾಲೂಕು ಆಡಳಿತ ಮುಂದಾಗುವಂತೆ ಆಮ್ ಆದ್ಮಿ ಪಾರ್ಟಿ ಮನವಿ ಮಾಡಿದೆ.
ಮನವಿಗೆ ಸ್ಪಂದಿಸಿ ಶಿರಸ್ತೇದಾರ್ ಮಂಜಾನಾಯ್ಕ ಹಾಗು ಭೂಮಿ ಕೇಂದ್ರದ ಮಲ್ಲಿಕಾರ್ಜುನಯ್ಯರವರು ಮಂಗಳವಾರ ಯುವತಿಯ ನಿವಾಸಕ್ಕೆ ತೆರಳಿ ಪರಿಶೀಲನೆ ನಡೆಸಿ ತಕ್ಷಣ ಕ್ರಮ ಕೈಗೊಂಡು ಪಿಂಚಣಿ ಸೌಲಭ್ಯಗಳನ್ನು ಕಲ್ಪಿಸಿಕೊಡುವ ಭರವಸೆ ನೀಡಿದರು. ತಾಲೂಕು ಆಡಳಿತದ ಕಾರ್ಯ ವೈಖರಿಗೆ ಆಮ್ ಆದ್ಮಿ ಪಾರ್ಟಿ ಮೆಚ್ಚುಗೆ ವ್ಯಕ್ತಪಡಿಸಿದೆ.
ಶಿರಸ್ತೇದಾರ್ ಮಂಜಾನಾಯ್ಕ ಹಾಗು ಭೂಮಿ ಕೇಂದ್ರದ ಮಲ್ಲಿಕಾರ್ಜುನಯ್ಯರವರು ಮಂಗಳವಾರ ಯುವತಿಯ ನಿವಾಸಕ್ಕೆ ತೆರಳಿ ಪರಿಶೀಲನೆ ನಡೆಸಿದರು.
ಅಧಿಕಾರಿಗಳ ಭೇಟಿ ಸಂದರ್ಭದಲ್ಲಿ ಆಮ್ ಆದ್ಮಿ ಪಾರ್ಟಿಯ ಪರಮೇಶ್ವರಚಾರ್, ಇಬ್ರಾಹಿಂ ಖಾನ್, ಪರಮೇಶ್ವರ್ ನಾಯ್ಕ್, ಜಾವೇದ್, ಎಚ್. ರವಿಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದರು.
No comments:
Post a Comment