ಸಮುದಾಯ ಬೆಂಗಳೂರು ವತಿಯಿಂದ ಹಮ್ಮಿಕೊಳ್ಳಲಾಗಿರುವ ಕಾಯಕ ಜೀವಿಗಳಿಗೆ ಶರಣು, ಬೀದಿರಂಗ ನಮನ, ಒಳಿತು ಮಾಡು ಮನುಸಾ.. ಕೊರೋನಾ ಕುರಿತು ಬೀದಿ ನಾಟಕ ಕಲಾವಿದರು.
ಭದ್ರಾವತಿ, ನ. ೬: ಸಮುದಾಯ ಬೆಂಗಳೂರು ವತಿಯಿಂದ ಹಮ್ಮಿಕೊಳ್ಳಲಾಗಿರುವ ಕಾಯಕ ಜೀವಿಗಳಿಗೆ ಶರಣು, ಬೀದಿರಂಗ ನಮನ, ಒಳಿತು ಮಾಡು ಮನುಸಾ.. ಕೊರೋನಾ ಕುರಿತು ಬೀದಿ ನಾಟಕ ಸಮುದಾಯ ಗ್ರಾಮೋದಯ ಜಾಗೃತಿ ಜಾಥಾ ಶನಿವಾರ ನಗರಕ್ಕೆ ಆಗಮಿಸಲಿದೆ.
ಶುಕ್ರವಾರ ಬೆಳಿಗ್ಗೆ ಬೆಂಗಳೂರಿನ ಜಾಲಹಳ್ಳಿ ಕ್ರಾಸ್‌ನಿಂದ ಆರಂಭಗೊಂಡಿರುವ ಜಾಥಾ ನೆಲಮಂಗಲ, ದಾಬಸ್ ಪೇಟೆ, ಸಂಜೆ ತುಮಕೂರು ತಲುಪಿತು. ನ.೭ರಂದು ಬೆಳಿಗ್ಗೆ ಕಸ್ತೂರಬಾ ಆಶ್ರಮ, ಅರಸೀಕೆರೆ, ಕಡೂರು ಕಾಲೇಜು ಮತ್ತು ತರೀಕೆರೆ ಮೂಲಕ ನಗರದ ಜಯಶ್ರೀ ವೃತ್ತಕ್ಕೆ ಸಂಜೆ ೪.೩೦ಕ್ಕೆ ತಲುಪಲಿದ್ದು, ನಂತರ ಶರಣು ಹಲ್ಲೂರು ಸಾಹಿತ್ಯ, ಶಶಿಧರ ಭಾರಿಘಾಟ್ ರಂಗಪಠ್ಯದ, ಮಾಲತೇಶ್ ನಿರ್ದೇಶನದ ಬೀದಿ ನಾಟಕ ಆರಂಭಗೊಳ್ಳಲಿದೆ. ಗಣೇಶ್ ಶೆಟ್ಟಿ ಜಾಥಾ ನಿರ್ವಾಹಕರಾಗಿದ್ದು, ಸಮುದಾಯ ಬೆಂಗಳೂರು ಕಾರ್ಯದರ್ಶಿ ಜೆ.ಸಿ ಶಶಿಧರ ಉಪಸ್ಥಿತರಿರುವರು.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಲಾವಿದರನ್ನು ಪ್ರೋತ್ಸಾಹಿಸಬೇಕೆಂದು ಚಲನಚಿತ್ರ ನಟ, ರಂಗಕಲಾವಿದ ಅಪರಂಜಿ ಶಿವರಾಜ್ ಕೋರಿದ್ದಾರೆ.
No comments:
Post a Comment