ಭದ್ರಾವತಿ ಉಜ್ಜನೀಪುರದಲ್ಲಿರುವ ಡಾನ್ ಬೋಸ್ಕೋ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಸ್ಮಾರ್ಟ್ ಸೋಲಾರ್ ಲ್ಯಾಬ್ ಆರಂಭಿಸಲಾಗಿದ್ದು, ಶಿವಮೊಗ್ಗ ಧರ್ಮಕ್ಷೇತ್ರದ ಧರ್ಮಗುರು ಫ್ರಾನ್ಸಿಸ್ ಸೆರಾವೋ ತರಬೇತಿಗೆ ಚಾಲನೆ ನೀಡಿದರು.
ಭದ್ರಾವತಿ, ನ. ೩: ನಗರದ ಉಜ್ಜನೀಪುರದಲ್ಲಿರುವ ಡಾನ್ ಬೋಸ್ಕೋ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಸ್ಮಾರ್ಟ್ ಸೋಲಾರ್ ಲ್ಯಾಬ್ ಆರಂಭಿಸಲಾಗಿದೆ.
ಸೆಲ್ಕೋ ಕಂಪನಿ ಸಹಯೋಗದೊಂದಿಗೆ ಲ್ಯಾಬ್ ಆರಂಭಗೊಂಡಿದ್ದು, ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಸೋಲಾರ್ ತರಬೇತಿ ನೀಡಲಾಗುತ್ತಿದೆ. ಶಿವಮೊಗ್ಗ ಧರ್ಮಕ್ಷೇತ್ರದ ಧರ್ಮಗುರು ಫ್ರಾನ್ಸಿಸ್ ಸೆರಾವೊ ತರಬೇತಿಗೆ ಚಾಲನೆ ನೀಡಿದರು. ಕುಲಪತಿ ಸ್ಟ್ಯಾನಿ ಡಿಸೋಜ, ಸಲಹೆಗಾರ ಲಾರೆನ್ಸ್, ಎಂಪಿಎಂ ಕಾರ್ಖಾನೆ ಮುಖ್ಯ ಆಡಳಿತಾಧಿಕಾರಿ ಶ್ರೀನಿವಾಸ್, ಸೆಲ್ಕೋ ಕಂಪನಿ ಶಿವಮೊಗ್ಗ ವಿಭಾಗದ ವ್ಯವಸ್ಥಾಪಕ ನವೀನ್ ಶೆಟ್ಟಿ, ಬೆಂಗಳೂರಿನ ಸ್ಕಿಪ್ ಕಾರ್ಯದರ್ಶಿ ಜೋಸೆಫ್ ಸ್ಟಾನ್ಲಿ, ಶ್ರೀ ಆದಿ ಚುಂಚನಗಿರಿ ವಿದ್ಯಾಸಂಸ್ಥೆ ಪ್ರಾಂಶುಪಾಲರಾದ ಡಾ. ಹರಿಣಾಕ್ಷಿ ಮತ್ತು ತರಬೇತಿ ಸಂಸ್ಥೆ ಪ್ರಾಂಶುಪಾಲ ಆರೋಗ್ಯರಾಜ್ ಇತರರು ಉಪಸ್ಥಿತರಿದ್ದರು.
ಈಗಾಗಲೇ ತರಬೇತಿ ಸಂಸ್ಥೆಯಲ್ಲಿ ಯಮಹಾ ಕಂಪನಿ ಸಹಯೋಗದೊಂದಿಗೆ ತರಬೇತಿ ನೀಡಲಾಗುತ್ತಿದ್ದು, ೬ನೇ ವರ್ಷ ಯಶಸ್ವಿಯಾಗಿ ಪೂರೈಸಿದೆ. ಇದೀಗ ಸೆಲ್ಕೋ ಕಂಪನಿ ಸೋಲಾರ್ ಲ್ಯಾಬ್ ಆರಂಭಿಸಿದ್ದು, ಭವಿಷ್ಯದಲ್ಲಿ ಸೋಲಾರ್ ಉತ್ಪನ್ನಗಳ ತಯಾರಿಕೆಗೆ ಹೆಚ್ಚಿನ ಬೇಡಿಕೆಗಳು ಕಂಡು ಬರುವ ಸಾಧ್ಯತೆಗಳು ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ತರಬೇತಿ ಆರಂಭಗೊಂಡಿರುವುದು ಈ ಭಾಗದ ನಿರುದ್ಯೋಗಿ ಯುವಕರಿಗೆ ಹೆಚ್ಚಿನ ಸಹಕಾರಿಯಾಗಿದೆ. ಉಳಿದಂತೆ ಸಂಸ್ಥೆಯಲ್ಲಿ ಫಿಟ್ಟರ್, ಎಲೆಕ್ಟ್ರಿಷಿಯನ್, ಎಲೆಕ್ಟ್ರಾನಿಕ್ ಮೆಕಾನಿಕ್ ವಿಷಯಗಳಲ್ಲಿ ತರಬೇತಿ ನೀಡಲಾಗುತ್ತಿದೆ.
No comments:
Post a Comment