ಭದ್ರಾವತಿ, ನ. ೧೯: ಬಾಲ್ಯ ವಿವಾಹ ನಡೆಸುತ್ತಿದ್ದ ವೇಳೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಬಾಲಕಿಯನ್ನು ರಕ್ಷಿಸಿರುವ ಘಟನೆ ಗುರುವಾರ ನಡೆದಿದೆ.
ಉಂಬ್ಳೆಬೈಲ್ ರಸ್ತೆಯಲ್ಲಿರುವ ಲಯನ್ಸ್ ಕ್ಲಬ್‌ನಲ್ಲಿ ನಗರದ ಅನ್ವರ್ ಕಾಲೋನಿ ಬಾಲಕಿಯೊಂದಿಗೆ ಆಸಿಫ್ ಅಲಿ ಎಂಬ ೨೧ ವರ್ಷದ ಯುವಕನ ವಿವಾಹ ನಡೆಯುತ್ತಿತ್ತು. ಆದರೆ, ಬಾಲಕಿಗೆ ಇನ್ನೂ ೧೮ ವರ್ಷ ಪೂರ್ಣಗೊಳ್ಳದೆ ಅಪ್ರಾಪ್ತಳಾಗಿದ್ದಾಳೆ ಎಂಬ ಖಚಿತ ಮಾಹಿತಿ ಆಧರಿಸಿದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಬಾಲಕಿಯನ್ನು ರಕ್ಷಿಸುವ ಜೊತೆಗೆ ವಿವಾಹ ನಡೆಸಲು ಮುಂದಾಗಿದ್ದ ವಧು ಹಾಗೂ ವರನ ಪೋಷಕರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಬಾಲಕಿಯನ್ನು ವಶಕ್ಕೆ ಪಡೆದು ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಮುಂದೆ ಹಾಜರುಪಡಿಸಿ ಬಾಲಮಂದಿರಕ್ಕೆ ಕಳುಹಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಮಕ್ಕಳ ಸಹಾಯವಾಣಿ ಕೇಂದ್ರದ ಶೃತಿ, ಶಿಶು ಅಭಿವೃದ್ಧಿ ಯೋಜನಾ ವಲಯ ಮೇಲ್ವಿಚಾರಕಿ ಯಶೋಧಾ, ರಮೇಶ್ ಹಾಗು ನ್ಯೂಟೌನ್ ಪೊಲೀಸರು ಪಾಲ್ಗೊಂಡಿದ್ದರು..
No comments:
Post a Comment