ಭದ್ರಾವತಿ, ಡಿ. 1: ರಾಜ್ಯ ಚುನಾವಣಾ ಆಯೋಗ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ಘೋಷಿಸಿದ್ದು, ತಾಲೂಕಿನ 41 ಗ್ರಾಮ ಪಂಚಾಯಿತಿಗಳ ಪೈಕಿ 35 ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದೆ.
ವೀರಾಪುರ ಮತ್ತು ಕೊಮಾರನಹಳ್ಳಿ ಪಂಚಾಯಿತಿಗಳ ಅವಧಿ ಇನ್ನೂ ಉಳಿದಿದ್ದು, ಈ ಹಿನ್ನಲೆಯಲ್ಲಿ ಈ ಎರಡು ಪಂಚಾಯಿತಿಗಳಿಗೆ ಚುನಾವಣೆ ನಡೆಯುತ್ತಿಲ್ಲ. ರಾಜ್ಯ ಸರ್ಕಾರ ಹೊಳೆಹೊನ್ನೂರು ಪಂಚಾಯಿತಿಯನ್ನು ಇತ್ತೀಚೆಗೆ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಿದ್ದು, ಈ ಹಿನ್ನಲೆಯಲ್ಲಿ ಹನುಮಂತಪುರ, ಎಮ್ಮೆಹಟ್ಟಿ, ಸಿದ್ಲಿಪುರ ಮತ್ತು ಹೊಳೆಹೊನ್ನೂರು ಈ ಗ್ರಾಮ ಪಂಚಾಯಿತಿಗಳಿಗೂ ಚುನಾವಣೆ ನಡೆಯುತ್ತಿಲ್ಲ.
No comments:
Post a Comment