ಸಿ.ಎಸ್ ಷಡಾಕ್ಷರಿ ಹೆಸರಿನಲ್ಲೇ ಎರಡು ಬಣಗಳ ನಡುವೆ ಪೈಪೋಟಿ
ಭದ್ರಾವತಿ, ಡಿ. ೯: ಯಾವುದೇ ಚುನಾವಣೆಗೆ ಕಡಿಮೆ ಇಲ್ಲದಂತೆ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆ ಸಹ ನಡೆಯುತ್ತಿದೆ. ನಾಮಪತ್ರ ಸಲ್ಲಿಕೆ ಹಾಗು ಪರಿಶೀಲನೆ ಬುಧವಾರ ನಡೆದಿದ್ದು, ಒಟ್ಟು ೪೦ ನಾಮಪತ್ರಗಳು ಸಲ್ಲಿಕೆಯಾಗಿವೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಾಕ್ಷರಿ ಹೆಸರಿನಲ್ಲಿ ಎರಡು ಬಣಗಳು ಪೈಪೋಟಿಗೆ ಮುಂದಾಗಿವೆ. ಸಿ.ಎಸ್ ಷಡಾಕ್ಷರಿ ಸಮಾನ ಮನಸ್ಕರ ಶಿಕ್ಷಕರ ಬಳಗ (ಸ್ಪಂದನ ತಂಡ) ಹಾಗು ಸಿ.ಎಸ್ ಷಡಾಕ್ಷರಿ ಅಭಿಮಾನಿ ಸಮಸ್ತ ಶಿಕ್ಷಕರ ಬಳಗ ಎರಡು ಬಣಗಳ ನಡುವೆ ತೀವ್ರ ಪೈಪೋಟಿ ಕಂಡು ಬರುತ್ತಿದೆ.
ತಾಲೂಕು ಸಂಘದ ಒಟ್ಟು ೧೮ ಕಾರ್ಯಕಾರಿ ಸಮಿತಿ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ಡಿ.೧೫ರಂದು ನಡೆಯುತ್ತಿದ್ದು, ಈ ಪೈಕಿ ೬ ಸ್ಥಾನಗಳನ್ನು ಮಹಿಳಾ ಶಿಕ್ಷಕಿಯರಿಗೆ ಮೀಸಲಿಡಲಾಗಿದೆ. ಸಿ.ಎಸ್ ಷಡಾಕ್ಷರಿ ಸಮಾನ ಮನಸ್ಕರ ಶಿಕ್ಷಕರ ಬಳಗದಿಂದ ಯು. ಮಹಾದೇವಪ್ಪ, ಎಂ.ಎಸ್ ಮಲ್ಲಿಕಾರ್ಜುನ, ಬಸವಂತರಾವ್ ದಾಳೆ, ಜಬ್ಬಾರ್‌ಖಾನ್, ಮುಕ್ತಿಯಾರ ಅಹಮದ್, ರಾಜಾನಾಯಕ್, ಜಿ.ಎಚ್ ವೇಣುಗೋಪಾಲ್, ಎಂ.ಆರ್ ರೇವಣಪ್ಪ, ಎಸ್.ಎನ್ ರವಿ, ಎ.ಎಸ್ ಜೈಕುಮಾರ್, ಕೆ.ವಿ ತಿಪ್ಪೇಸ್ವಾಮಿ, ಎಚ್.ಎಂ ಜಗದೀಶ್, ಮರ್ಸಿಲಿನ್ ಲೀನಾ ಡಿಮೆಲ್ಲೋ, ಫರೀದುನ್ನೀಸಾ, ಎಂ. ರುದ್ರಮ್ಮ, ಎನ್. ಜ್ಯೋತಿ, ಎಚ್.ಎಸ್ ಸುಮಾ ಮತ್ತು ಜಿ.ಎಸ್ ಜ್ಯೋತಿ ಕಣದಲ್ಲಿದ್ದಾರೆ.
ಸಿ.ಎಸ್ ಷಡಾಕ್ಷರಿ ಅಭಿಮಾನಿ ಸಮಸ್ತ ಶಿಕ್ಷಕರ ಬಳಗದಿಂದ ಎಂ.ಎಸ್ ಬಸವರಾಜ್, ಜೆ. ಮೋಹಿದ್ದೀನ್ ಸಾಬ್, ಕೆ.ಆರ್ ಅಶೋಕ್, ಎಸ್.ಕೆ ಮೋಹನ್, ವೈ.ಎನ್ ಶ್ರೀಧರಗೌಡ, ಟಿ. ಪೃಥ್ವಿರಾಜ್, ಪಿ. ಭರತ್‌ಕುಮಾರ್, ಎಂ.ಸಿ ಆನಂದ್, ಎಸ್. ಹನುಮಂತಪ್ಪ, ಕೆ.ಎನ್ ರವಿಕುಮಾರ್, ಎಸ್.ಪಿ ರಾಜು, ಕೆ. ಬದಿಯನಾಯ್ಕ, ಕೆ.ಎಂ ಶಾರದಮ್ಮ, ಸುಮತಿ ಕಾರಂತ್, ಎಸ್. ಚೈತ್ರ, ಎಚ್.ಎಸ್ ಮಾಯಮ್ಮ ಅಸ್ಮಾ ಬೇಗಂ ಮತ್ತು ಎಸ್.ಎಸ್ ಸುರ್ಮಲ ಕಣದಲ್ಲಿದ್ದಾರೆ.
ಈ ಬಣದ ಎಂ.ಎಸ್ ಬಸವರಾಜ್‌ರವರು ೩ ಬಾರಿ ಆಯ್ಕೆಯಾಗಿ ಸಂಘದ ಅಧ್ಯಕ್ಷರಾಗಿದ್ದು, ೪ನೇ ಬಾರಿಗೆ ಸ್ಪರ್ಧಿಸಿದ್ದಾರೆ. ಉಳಿದಂತೆ ೪ ಮಂದಿ ಸ್ವತಂತ್ರ ಅಭ್ಯರ್ಥಿಗಳಾಗಿ ಕಣದಲ್ಲಿದ್ದು, ನಿವೃತ್ತ ಪ್ರಾಂಶುಪಾಲ ಗೋವಿಂದರಾಜು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಸಂಘದ ಚುನಾವಣೆ ಸುಮಾರು ೧ ತಿಂಗಳ ಹಿಂದೆಯೇ ಘೋಷಿಸಲಾಗಿತ್ತು. ಅದರೆ ಚುನಾವಣಾ ಸಂಬಂಧ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆಯಲ್ಲಿದ್ದ ಕಾರಣ ತಡೆ ನೀಡಲಾಗಿತ್ತು.
No comments:
Post a Comment