ಭದ್ರಾವತಿ, ಡಿ. ೧೬ : ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಕಾರ್ಯಕಾರಿ ಸಮಿತಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಎಂ.ಎಸ್ ಬಸವರಾಜ್ ನೇತೃತ್ವದ ತಂಡ ಹೆಚ್ಚಿನ ಸ್ಥಾನಗಳನ್ನು ಪಡೆದುಕೊಂಡಿದೆ.
ಒಟ್ಟು ೧೮ ಸ್ಥಾನಗಳಿಗೆ ಸಿ.ಎಸ್ ಷಡಾಕ್ಷರಿ ಸಮಾನ ಮನಸ್ಕರ ಶಿಕ್ಷಕರ ಬಳಗ (ಸ್ಪಂದನ ತಂಡ) ಹಾಗು ಹಾಲಿ ಅಧ್ಯಕ್ಷ ಎಂ.ಎಸ್ ಬಸವರಾಜ್ ನೇತೃತ್ವದ ಸಿ.ಎಸ್ ಷಡಾಕ್ಷರಿ ಅಭಿಮಾನಿ ಸಮಸ್ತ ಶಿಕ್ಷಕರ ಬಳಗ ಈ ಎರಡು ಬಣಗಳ ನಡುವೆ ತೀವ್ರ ಪೈಪೋಟಿ ಕಂಡು ಬಂದಿತ್ತು.
ಈ ಪೈಕಿ ಎಂ.ಎಸ್ ಬಸವರಾಜ್ ನೇತೃತ್ವದ ಬಣದಿಂದ ಎಸ್.ಕೆ ಮೋಹನ್, ಎಂ.ಎಸ್ ಬಸವರಾಜ್, ಟಿ. ಪೃಥ್ವಿರಾಜ್, ವೈ.ಎನ್ ಶ್ರೀಧರಗೌಡ, ಪಿ.ಆರ್ ಭರತ್ ಕುಮಾರ್, ಎಂ.ಸಿ ಆನಂದ್, ಎಸ್ ಪಿ ರಾಜು, ಎಸ್. ಹನುಮಂತಪ್ಪ, ಚಿತ್ರ, ಆಸ್ಮಾಬೇಗಂ, ಎಚ್.ಎಸ್ ಮಾಯಮ್ಮ, ಎಸ್‌ಎಸ್ ನಿರ್ಮಲಾ,ಸುಮತಿ ಕಾರಂತ್ ಗೆಲುವು ಸಾಧಿಸಿದ್ದಾರೆ.
ಉಳಿದಂತೆ ಸಿ.ಎಸ್ ಷಡಾಕ್ಷರಿ ಸಮಾನ ಮನಸ್ಕರ ಶಿಕ್ಷಕರ ಬಳಗ (ಸ್ಪಂದನ ತಂಡ)ದಿಂದ ಎಂ.ಎಸ್ ಮಲ್ಲಿಕಾರ್ಜುನ್, ಡಿ.ಎಸ್ ಬಸವಂತರಾವ್ ದಾಳೆ, ಎಂ.ಬಿ ಜಯಕುಮಾರ್, ಯು.ಮಹಾದೇವಪ್ಪ,ಎಸ್ ಮತ್ತು ಎನ್ ಜ್ಯೋತಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿ ನಿವೃತ್ತ ಪ್ರಾಂಶುಪಾಲ ಕೆ.ಎಚ್. ಗೋವಿಂದರಾಜು ಕರ್ತವ್ಯ ನಿರ್ವಹಿಸಿದರು.
No comments:
Post a Comment