ಭದ್ರಾವತಿ ತಾಲೂಕು ಮಾಜಿ ಸೈನಿಕರ ಸಂಘದ ವತಿಯಿಂದ ಭಾರತೀಯ ಸೇನೆ, ಅರೆಸೇನಾಪಡೆ, ಪೊಲೀಸ್ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆಗಳ ಹುದ್ದೆಗಳ ಸೇರ್ಪಡೆಗೆ ನೆರವಾಗುವಂತೆ ಗ್ರಾಮೀಣ ಹಾಗೂ ನಗರ ಪ್ರದೇಶದ ಯುವಕರಿಗೆ ನಗರದ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ನೀಡಲಾಗುತ್ತಿರುವ ಉಚಿತ ದೈಹಿಕ ಹಾಗೂ ಲಿಖಿತ ಪರೀಕ್ಷೆ ತರಬೇತಿ ಸ್ಥಳಕ್ಕೆ ಪೊಲೀಸ್ ಉಪಾಧೀಕ್ಷ ಕೃಷ್ಣಮೂರ್ತಿ ಆಗಮಿಸಿ ತರಬೇತಿ ಪಡೆಯುತ್ತಿರುವವರಿಗೆ ಸ್ಫೂರ್ತಿದಾಯಕ ಮಾತುಗಳನ್ನಾಡಿದರು.
ಭದ್ರಾವತಿ, ಡಿ. ೧೬: ದೇಶ ಸೇವೆ ಪುಣ್ಯದ ಕೆಲಸ, ಇದರಿಂದ ನಮಗೆ ಜನ್ಮ ನೀಡಿದ ತಂದೆ-ತಾಯಿ ಋಣ ತೀರಿಸಿದಂತಾಗುತ್ತದೆ ಎಂದು ಪೊಲೀಸ್ ಉಪಾಧೀಕ್ಷಕ ಕೃಷ್ಣಮೂರ್ತಿ ಹೇಳಿದರು.
ಅವರು ಬುಧವಾರ ಮಾಜಿ ಸೈನಿಕರ ಸಂಘದ ವತಿಯಿಂದ ಭಾರತೀಯ ಸೇನೆ, ಅರೆಸೇನಾಪಡೆ, ಪೊಲೀಸ್ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆಗಳ ಹುದ್ದೆಗಳ ಸೇರ್ಪಡೆಗೆ ನೆರವಾಗುವಂತೆ ಗ್ರಾಮೀಣ ಹಾಗೂ ನಗರ ಪ್ರದೇಶದ ಯುವಕರಿಗೆ ನಗರದ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ನೀಡಲಾಗುತ್ತಿರುವ ಉಚಿತ ದೈಹಿಕ ಹಾಗೂ ಲಿಖಿತ ಪರೀಕ್ಷೆ ತರಬೇತಿ ಸ್ಥಳಕ್ಕೆ ಆಗಮಿಸಿ ತರಬೇತಿ ಪಡೆಯುತ್ತಿರುವವರಿಗೆ ಸ್ಫೂರ್ತಿದಾಯಕ ಮಾತುಗಳನ್ನಾಡಿದರು.
ತಮ್ಮ ಪೊಲೀಸ್ ವೃತ್ತಿಜೀವನದ ಅನುಭವಗಳನ್ನು ವಿವರಿಸಿ ಉಚಿತ ತರಬೇತಿ ಸದುಪಯೋಗ ಎಲ್ಲರೂ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಸಂಘದ ಕಾರ್ಯದರ್ಶಿ ವೆಂಕಟ್ ಗಿರಿ, ಮುದಗಲ ರಾಮರೆಡ್ಡಿ, ಅಭಿಲಾಶ್, ವೆಂಕಟೇಶ್, ಕಮಾಂಡೋ ಗಿರಿ, ಮಹೇಶ್, ರಮೇಶ್, ಚಂದ್ರು, ಶ್ರೀನಿವಾಸ್, ಮಂಜುನಾಥ್ ಮತ್ತು ಶ್ರೀನಿವಾಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment