Thursday, December 31, 2020

ಮಾದಕ ವಸ್ತುವಾಗಿ ಪರಿವರ್ತನೆಗೊಳ್ಳುವ ಮಾತ್ರೆಗಳ ಮಾರಾಟ : ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹ

ಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ತಹಸೀಲ್ದಾರ್ ಮನವಿ
ಭದ್ರಾವತಿ, ಡಿ. ೩೧: ಅಪ್ರಾಪ್ತ ಬಾಲಕರಿಗೆ ವೈದ್ಯರ ಯಾವುದೇ ಸಲಹೆ ಚೀಟಿ ಇಲ್ಲದೆ ಮಾದಕ ವಸ್ತುವಾಗಿ ಪರಿವರ್ತನೆಗೊಳ್ಳುವ ಮಾತ್ರೆಗಳನ್ನು ನಗರದ ಔಷಧ ಅಂಗಡಿಯೊಂದರಲ್ಲಿ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಗುರುವಾರ ಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
ಹಳೇನಗರದ ಸಾರ್ವಜನಿಕ ಸರ್ಕಾರಿ ಅಸ್ಪತ್ರೆ ಮುಂಭಾಗದಲ್ಲಿರುವ ಔಷಧಿ ಅಂಗಡಿಯೊಂದರಲ್ಲಿ 'ನೈಟ್ರೋವಿಟ್ ೧೦ಎಂ.ಜಿ' ಎಂಬ ಮಾದಕ ವಸ್ತುವಾಗಿ ಪರಿವರ್ತನೆಗೊಳ್ಳುವ ಮಾತ್ರೆಗಳನ್ನು ವೈದ್ಯರ ಯಾವುದೇ ಸಲಹೆ ಚೀಟಿ ಇಲ್ಲದೆ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ. ಅಲ್ಲದೆ ನಿಗದಿಪಡಿಸಲಾಗಿರುವ ದರದ ಬದಲಾಗಿ ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗುತ್ತಿದೆ. ಈ ಮಾತ್ರೆಗಳ ಸೇವನೆಯಿಂದ ಅಪ್ರಾಪ್ತ ಬಾಲಕರು ದಾರಿ ತಪ್ಪುತ್ತಿದ್ದು, ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಅಂಗಡಿ ಮಾಲೀಕರ ವಿರದ್ಧ ಕಾನೂನು ಕ್ರಮ ಕೈಗೊಂಡು ಪರವಾನಿಗೆ ರದ್ದುಪಡಿಸಬೇಕೆಂದು ಆಗ್ರಹಿಸಲಾಗಿದೆ.
ಜನಪರ ವೇದಿಕೆ ಜಿಲ್ಲಾ ಕಾರ್ಯಧ್ಯಕ್ಷ ಕೆ. ಸುದೀಪ್‌ಕುಮಾರ್, ತಾಲೂಕು ಅಧ್ಯಕ್ಷ ಎಸ್.ಎಸ್ ಬೈರಪ್ಪ, ಮುಕುಂದಪ್ಪ, ಜಿಲ್ಲಾ ಮುಖಂಡರಾದ ಫ್ರಾನ್ಸಿಸ್, ಪ್ರಸನ್ನಕುಮಾರ್, ಮಹಮದ್ ಶಫಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಚಿತ್ರ: ಡಿ೩೧-ಬಿಡಿವಿಟಿ
ಅಪ್ರಾಪ್ತ ಬಾಲಕರಿಗೆ ವೈದ್ಯರ ಯಾವುದೇ ಸಲಹೆ ಚೀಟಿ ಇಲ್ಲದೆ ಮಾದಕ ವಸ್ತುವಾಗಿ ಪರಿವರ್ತನೆಗೊಳ್ಳುವ ಮಾತ್ರೆಗಳನ್ನು ಭದ್ರಾವತಿ ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಮುಂಭಾಗದಲ್ಲಿರುವ ಔಷಧ ಅಂಗಡಿಯೊಂದರಲ್ಲಿ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಗುರುವಾರ ಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.



No comments:

Post a Comment