ಸಂಪತ್ ರಾಜ್ ಬಾಂಟಿಯಾ
ಭದ್ರಾವತಿ, ಡಿ. ೨: ರಾಜ್ಯ ಸರ್ಕಾರದ ವಸತಿ ಇಲಾಖೆ ಕಾರ್ಯದರ್ಶಿಯವರು ರಾಜ್ಯಪಾಲರ ಆದೇಶದ ಮೇರೆಗೆ ನಗರದ ಆಶ್ರಯ ಸಮಿತಿಗೆ ೪ ಮಂದಿಯನ್ನು ನಾಮನಿರ್ದೇಶನ ಸದಸ್ಯರನ್ನಾಗಿ ನೇಮಕಗೊಳಿಸಿದ್ದಾರೆ.
ಹಿಂದುಳಿದ ವರ್ಗದಿಂದ ಹುತ್ತಾಕಾಲೋನಿ ನಿವಾಸಿ ಸತೀಶ್, ಸಾಮಾನ್ಯ ವರ್ಗದಿಂದ ಭಂಡಾರಹಳ್ಳಿ ನಿವಾಸಿ ದೇವರಾಜ್, ಅಲ್ಪ ಸಂಖ್ಯಾತರ ವಿಭಾಗದಿಂದ ಜೈನ ಸಮಾಜದ ಭೂತನಗುಡಿ ನಿವಾಸಿ ಸಂಪತ್ ರಾಜ್ ಬಾಂಟಿಯಾ ಹಾಗು ಮಹಿಳಾ ವರ್ಗದಿಂದ ಪರಿಶಿಷ್ಟ ಜಾತಿಯ ಬಸಲೀಕಟ್ಟೆ ಗ್ರಾಮದ ಗೌರಮ್ಮರವರನ್ನು ಅಧಿಕಾರೇತರ ಸದಸ್ಯರನ್ನಾಗಿ ಅಧೀನ ಕಾರ್ಯದರ್ಶಿ ಜಿ. ಲಕ್ಷ್ಮಣ ನೇಮಕಗೊಳಿಸಿದ್ದಾರೆ.
No comments:
Post a Comment