ಭದ್ರಾವತಿ, ಜ. ೧೪: ಕಳೆದ ಸುಮಾರು ೧೨ ವರ್ಷಗಳಿಂದ ಸಿಎ ತರಬೇತಿಯಲ್ಲಿ ಗುರುತಿಸಿಕೊಂಡಿರುವ ಶಿವಮೊಗ್ಗ ಅಕಾಡೆಮಿ ಇದೀಗ ಬ್ಯಾಂಕಿಂಗ್, ರೈಲ್ವೆ, ಎಲ್‌ಐಸಿ ಮತ್ತು ಜಿಐಸಿ ಸೇರಿದಂತೆ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ತರಬೇತಿ ನೀಡಲು ಮುಂದಾಗಿದೆ. ಆಕಾಡೆಮಿ ವತಿಯಿಂದ ಜ.೧೭ ಮತ್ತು ೧೮ ಎರಡು ದಿನ ಬ್ಯಾಂಕಿಂಗ್ ಪರೀಕ್ಷೆಗಳ ಉಚಿತ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.
ಬೆಳಿಗ್ಗೆ ೧೦ ರಿಂದ ಮಧ್ಯಾಹ್ನ ೨ ಗಂಟೆವರೆಗೆ ಮಥುರಾ ಪ್ಯಾರಡೈಸ್ ಸಮೀಪದ ವಾತ್ಸಲ್ಯ ಆಸ್ಪತ್ರೆ ಬಳಿ ಇರುವ ಆಕಾಡೆಮಿಯಲ್ಲಿ ಕಾರ್ಯಾಗಾರ ನಡೆಯಲಿದ್ದು, ಫೆ.೧ರಿಂದ ತರಬೇತಿಗಳು ಆರಂಭಗೊಳ್ಳಲಿವೆ. ಈಗಾಗಲೇ ನೊಂದಾಣಿ ಪ್ರಕ್ರಿಯೆ ಆರಂಭಗೊಂಡಿದ್ದು, ಆಸಕ್ತರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು ನಗರದ ನಿವಾಸಿ ಜೆಡಿಯು ಯುವ ಮುಖಂಡ ಶಶಿಕುಮಾರ್ ಎಸ್. ಗೌಡ ಹಾಗು ಸುಬ್ರಮಣ್ಯ ಕೋರಿದ್ದಾರೆ. ಹೆಚ್ಚಿನ ಮಾಹಿತಿಗೆ ಮೊ: ೯೩೮೦೬೮೫೬೩೫ ಅಥವಾ ೯೩೪೨೪೪೨೩೦೨ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.
No comments:
Post a Comment