ಮಾನವೀಯ ನೆಲೆಗಟ್ಟಿನಲ್ಲಿ ಸ್ಪಂದಿಸಿದ ವಿವಿಧ ಸಂಘಟನೆಗಳು
ಭದ್ರಾವತಿ ನ್ಯೂಟೌನ್ ತಮಿಳು ಸರ್ಕಾರಿ ಶಾಲೆ ಹಿಂಭಾಗದ ಖಾಲಿ ಜಾಗದಲ್ಲಿ ಮಂಗಳವಾರ ಸಮಾಜ ಸೇವಕ ರೋಸಯ್ಯನವರ ಸ್ಮರಣಾರ್ಥ ನಿರಾಶ್ರಿತರಿಗೆ ಉಚಿತ ಕ್ಷೌರ ಕೈಗೊಳ್ಳವ ಮೂಲಕ ಸೇವಾ ಕಾರ್ಯ ನಡೆಸಲಾಯಿತು.
ಭದ್ರಾವತಿ, ಫೆ. ೯: ನಿರಾಶ್ರಿತರನ್ನು ಸಮಾಜದಲ್ಲಿ ಕಾಣುವ ರೀತಿ ಎಲ್ಲರಿಗೂ ತಿಳಿದಿದೆ. ಬಹಳಷ್ಟು ಮಂದಿ ನಮಗೂ ಅವರಿಗೂ ಯಾವುದೇ ಸಂಬಂಧವಿಲ್ಲದಂತೆ ನಡೆದುಕೊಳ್ಳುತ್ತಾರೆ. ಅಪರೂಪಕ್ಕೆ ಕೆಲವರು ಮಾನವೀಯ ನೆಲೆಗಟ್ಟಿನಲ್ಲಿ ಅವರ ಬೆಂಬಲಕ್ಕೆ ನಿಲ್ಲುತ್ತಾರೆ. ಇಂತಹ ವ್ಯಕ್ತಿಗಳಲ್ಲಿ ದಿವಂಗತ ರೋಸಯ್ಯ ಸಹ ಒಬ್ಬರಾಗಿದ್ದರು. ಇವರ ನಿಧನದ ನಂತರ ಇವರ ಪುತ್ರ ಆರ್. ಮೋಸಸ್ ತಂದೆಯ ಸೇವಾ ಕಾರ್ಯವನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ.
ರೋಸಯ್ಯನವರು ತಾವು ದುಡಿದ ಸ್ವಲ್ಪ ಭಾಗವನ್ನು ನಿರಾಶ್ರಿತರ ಸೇವೆಗಾಗಿ ಮೀಸಲಿಟ್ಟಿದ್ದರು. ಪ್ರತಿದಿನ ನಿರಾಶ್ರಿತರಿಗೆ ಊಟದ ವ್ಯವಸ್ಥೆ ಕೈಗೊಳ್ಳುತ್ತಿದ್ದರು. ಇದೀಗ ಅವರ ಸೇವಾ ಕಾರ್ಯದೊಂದಿಗೆ ಅವರ ನೆನಪು ಶಾಶ್ವತವಾಗಿ ಉಳಿದುಕೊಂಡಿದೆ. ಮೋಸಸ್‌ರವರು ತಂದೆ ಕೈಗೊಳ್ಳುತ್ತಿದ್ದ ಸೇವಾ ಕಾರ್ಯಕ್ಕೆ ಇದೀಗ ಮತ್ತೊಂದು ಸೇವೆಯನ್ನು ಸೇರ್ಪಡೆಮಾಡಿದ್ದಾರೆ. ನಿರಾಶ್ರಿತರಿಗೆ ಉಚಿತ ಕ್ಷೌರ ವ್ಯವಸ್ಥೆ ಕಲ್ಪಿಸುವ ಮೂಲಕ ಅವರ ವೈಯಕ್ತಿಕ ಶುಚಿತ್ವದ ಬಗ್ಗೆ ಕಾಳಜಿವಹಿಸಿದ್ದಾರೆ. ಇವರ ಕಾರ್ಯಕ್ಕೆ ಪೊಲೀಸ್ ಉಮೇಶ್ ನೇತೃತ್ವದ ಸ್ನೇಹ ಜೀವಿ ಬಳಗ ಹಾಗು ನಗರದ ಸವಿತ ಸಮಾಜ ಸಹ ಕೈಜೋಡಿಸಿದೆ.
ಮಂಗಳವಾರ ನ್ಯೂಟೌನ್ ತಮಿಳು ಸರ್ಕಾರಿ ಶಾಲೆ ಹಿಂಭಾಗದ ಖಾಲಿ ಜಾಗದಲ್ಲಿ ರೋಸಯ್ಯನವರ ಸ್ಮರಣಾರ್ಥ ನಿರಾಶ್ರಿತರಿಗೆ ಉಚಿತ ಕ್ಷೌರ ಕೈಗೊಳ್ಳವ ಮೂಲಕ ಸೇವಾ ಕಾರ್ಯ ನಡೆಸಲಾಯಿತು.
ಈ ಕಾರ್ಯಕ್ಕೆ ಕ್ರೈಸ್ತ ಧರ್ಮಗುರುಗಳು, ಪೊಲೀಸ್ ಉಮೇಶ್, ಸತೀಶ್‌ಗೌಡ, ಸವಿತ ಸಮಾಜದ ಅಧ್ಯಕ್ಷರು, ಪದಾಧಿಕಾರಿಗಳು ಹಾಗು ದಯಾಸಾಗರ್ ಟ್ರಸ್ಟ್‌ನ ಪ್ರಮುಖರು ಸೇರಿದಂತೆ ಇನ್ನಿತರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
No comments:
Post a Comment