ಶ್ರೀ ನಾಮದೇವಾನಂದ ಭಾರತಿ ಸ್ವಾಮೀಜಿ
ಭದ್ರಾವತಿ, ಏ. ೧೧: ತಾಲೂಕಿನ ಗೊಂದಿ ಸಾಧಕ ಆಶ್ರಮದ ಶ್ರೀ ನಾಮದೇವಾನಂದ ಭಾರತಿ ಸ್ವಾಮೀಜಿ(೭೪) ಭಾನುವಾರ ಬೆಳಿಗ್ಗೆ ನಿಧನ ಹೊಂದಿದರು.
ಹುಬ್ಬಳ್ಳಿಯಲ್ಲಿ ಕಾರ್ಯಕ್ರಮ ಒಂದರಲ್ಲಿ ಪಾಲ್ಗೊಳ್ಳಲು ತೆರಳಿದ್ದ ಸ್ವಾಮೀಜಿಯವರು ಅನಾರೋಗ್ಯಕ್ಕೆ ಒಳಗಾಗಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿದಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸ್ವಾಮೀಜಿಯವರ ಪಾರ್ಥಿವ ಶರೀರವನ್ನು ಮಧ್ಯಾಹ್ನ ಗೊಂದಿ ಸಾಧಕ ಆಶ್ರಮಕ್ಕೆ ತರಲಾಯಿತು.
೧೯೮೮ರಲ್ಲಿ ಶಿವಮೊಗ್ಗ ಚಿಕ್ಕದಾಳು ಸಿದ್ದಾರೂಢ ಆಶ್ರಮದ ಶ್ರೀ ಬಸವರಾಜ ದೇಶಿಕೇಂದ್ರ ಸ್ವಾಮೀಜಿಯವರಿಂದ ದೀಕ್ಷೆ ಪಡೆದುಕೊಂಡಿದ್ದರು. ಪಂಡರಿ ಸಂಪ್ರದಾಯ ರೂಢಿಸಿಕೊಂಡಿದ್ದ ಶ್ರೀಗಳು ನಂತರ ತಾಲೂಕಿನ ಗೊಂದಿ ಗ್ರಾಮಕ್ಕೆ ಆಗಮಿಸಿ ಸಾಧಕ ಆಶ್ರಮ ಸ್ಥಾಪಿಸುವಲ್ಲಿ ಯಶಸ್ವಿಯಾಗಿದ್ದರು. ಶ್ರೀಗಳು ಹಿರಿಯ ಆಧ್ಯಾತ್ಮಿಕ ಮಾರ್ಗದರ್ಶಕರು, ಚಿಂತಕರು, ಧ್ಯಾನ್ಯಾಸಕ್ತರಾಗಿದ್ದರು. ತಮ್ಮದೇ ಆದ ಭಕ್ತರ ವೃಂದವನ್ನು ಹೊಂದಿದ್ದರು.
ಆಶ್ರಮದ ಪೀಠಾಧ್ಯಕ್ಷರಾದ ನಂತರ ಹಲವಾರು ಸಾಮಾಜಿಕ ಹಾಗು ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಗಮನ ಸೆಳೆದಿದ್ದರು. ಶ್ರೀಗಳ ನಿಧನಕ್ಕೆ ವಿವಿಧ ಮಠಾಧೀಶರು, ಗಣ್ಯರು, ಜನಪ್ರತಿನಿಧಿಗಳು ಸಂತಾಪ ಸೂಚಿಸಿದ್ದಾರೆ.
No comments:
Post a Comment