೮ ದಿನಗಳ ಅವಧಿಯಲ್ಲಿ ಕೇವಲ ೪ ದಿನ ಅವಕಾಶ, ಚುನಾವಣಾ ಆಯೋಗದ ವಿರುದ್ಧ ಅಸಮಾಧಾನ
ಭದ್ರಾವತಿ, ಏ. ೧೪: ಇಲ್ಲಿನ ನಗರಸಭೆ ೩೫ ವಾರ್ಡ್‌ಗಳಿಗೆ ಸುಮಾರು ೨ ವರ್ಷಗಳ ನಂತರ ಎದುರಾಗಿರುವ ಚುನಾವಣೆ ಒಂದೆಡೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಮತ್ತೊಂದೆಡೆ ನಾಮಪತ್ರ ಸಲ್ಲಿಕೆಗೆ ನಿಗದಿಪಡಿಸಿರುವ ಕಾಲಾವಕಾಶಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ವಿರುದ್ಧ ಅಸಮಾಧಾನ ಸಹ ವ್ಯಕ್ತವಾಗುತ್ತಿದೆ.
ಚುನಾವಣಾ ಆಯೋಗ ಏ.೮ ರಿಂದ ಏ.೧೫ರ ವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಿದೆ. ಆದರೆ ಸುಮಾರು ೮ ದಿನಗಳ ಅವಧಿಯಲ್ಲಿ ಕೇವಲ ೪ ದಿನ ಮಾತ್ರ ನಾಮಪತ್ರ ಸಲ್ಲಿಕೆಗೆ ಅವಕಾಶ ಲಭಿಸಿದೆ. ಉಳಿದ ೪ ದಿನ ಸರ್ಕಾರಿ ರಜಾದಿನಗಳಾಗಿವೆ. ಇದರಿಂದಾಗಿ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿರುವ ಆಕಾಂಕ್ಷಿಗಳಿಗೆ ತೊಂದರೆಯಾಗಿದೆ. ಕಡಿಮೆ ಅವಧಿಯಲ್ಲಿ ನಾಮಪತ್ರ ಸಲ್ಲಿಸಲು ಸಾಧ್ಯವಾಗದೆ ಚುನಾವಣಾ ಸ್ಪರ್ಧೆಯಿಂದ ವಂಚಿತರಾಗುವಂತಾಗಿದೆ. ಈ ಹಿನ್ನಲೆಯಲ್ಲಿ ನಾಮಪತ್ರ ಸಲ್ಲಿಸುವ ಅವಧಿ ವಿಸ್ತರಿಸುವಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹಾಗು ಆಕಾಂಕ್ಷಿಗಳು ಮನವಿ ಮಾಡಿದ್ದಾರೆ.
No comments:
Post a Comment