ನಿರ್ಮಲಾ
ಭದ್ರಾವತಿ, ಮೇ. ೨೫: ನಗರದ ಹೊಸಮನೆ ನಿವಾಸಿ, ಸುಗಮ ಸಂಗೀತ ಗಾಯಕ ಹಾಗು ಚಿತ್ರ ಕಲಾವಿದ ವಾಣಿ ಆರ್ಟ್ಸ್‌ನ ಸುಬ್ರಹ್ಮಣ್ಯ ಕೆ. ಅಯ್ಯರ್ ಅವರ ಪತ್ನಿ ನಿರ್ಮಲಾ(೪೯) ಮಂಗಳವಾರ ನಿಧನ ಹೊಂದಿದರು.
ಪತ್ನಿ, ಓರ್ವ ಪುತ್ರಿಯನ್ನು ಹೊಂದಿದ್ದರು. ನಿರ್ಮಲಾ ಅವರು ಸುಬ್ರಹ್ಮಣ್ಯ ಅವರ ಕಲಾ ಕ್ಷೇತ್ರದ ಸಾಧನೆಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಜೊತೆಗೆ ಬೆನ್ನೆಲುಬಾಗಿದ್ದರು. ಇವರ ನಿಧನಕ್ಕೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು, ಗಣ್ಯರು ಸಂತಾಪ ಸೂಚಿಸಿದ್ದಾರೆ.
No comments:
Post a Comment