ಭದ್ರಾವತಿ, ಜೂ. ೨೮: ತಾಲೂಕಿನಲ್ಲಿ ಕೊರೋನಾ ಸೋಂಕಿನ ಪ್ರಮಾಣ ಇಳಿಮುಖವಾದರೂ ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ. ಸೋಮವಾರ ಒಂದೇ ದಿನ ೭ ಜನ ಬಲಿಯಾಗಿದ್ದಾರೆ.
ನಗರ ಭಾಗದಲ್ಲಿ ಒಟ್ಟು ೧೩ ಸೋಂಕು ದೃಢಪಟ್ಟಿದ್ದು, ಒಟ್ಟು ೬ ಮಂದಿ ಮೃತಪಟ್ಟಿದ್ದಾರೆ. ಉಳಿದಂತೆ ಗ್ರಾಮೀಣ ಭಾಗದಲ್ಲಿ ೧೮ ಸೋಂಕು ದೃಢಪಟ್ಟಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಒಟ್ಟು ತಾಲೂಕಿನಲ್ಲಿ ೩೧ ಸೋಂಕು ಪತ್ತೆಯಾಗಿದ್ದು, ೭ ಮಂದಿ ಬಲಿಯಾಗಿದ್ದಾರೆ.
ಕೊರೋನಾ ಗೆದ್ದ ಡಿ.ಸಿ ಮಾಯಣ್ಣ :
ಕೊರೋನಾ ಸೋಂಕಿಗೆ ಒಳಗಾಗಿ ಸುಮಾರು ಒಂದು ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದ ೮೭ರ ಹರೆಯದ ಹಿರಿಯ ಕಾರ್ಮಿಕ ಮುಖಂಡ ಕಾಮ್ರೇಡ್ ಡಿ.ಸಿ ಮಾಯಣ್ಣ ಗುಣಮುಖರಾಗಿದ್ದಾರೆ.
ನಗರದಲ್ಲಿ ದಲಿತ ಮುಖಂಡ ಎಂ. ಶ್ರೀನಿವಾಸನ್ ಸೇರಿದಂತೆ ಹಲವಾರು ಹೋರಾಟಗಾರರು ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಈ ನಡುವೆ ಡಿ.ಸಿ ಮಾಯಣ್ಣ ಚೇತರಿಸಿಕೊಂಡು ಮನೆಗೆ ಹಿಂದಿರುಗಿರುವುದು ಹೋರಾಟಗಾರರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸಿದೆ. ಆಮ್ ಪಾರ್ಟಿ ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್ ಡಿ.ಸಿ ಮಾಯಣ್ಣ ಅವರಿಗೆ ಭಗವಂತ ಇನ್ನೂ ಹೆಚ್ಚಿನ ಆರೋಗ್ಯ ಕರುಣಿಸಲೆಂದು ಪ್ರಾರ್ಥಿಸುವ ಜೊತೆಗೆ ಮುಂದಿನ ಹೋರಾಟಗಳಿಗೆ ಡಿ.ಸಿ ಮಾಯಣ್ಣ ಶಕ್ತಿ ತುಂಬಲೆಂದು ಹಾರೈಸಿದ್ದಾರೆ.
ಮಾಯಣ್ಣನವರು ಹಿರಿಯ ಕಾರ್ಮಿಕರ ಮುಖಂಡರು, ಜೇವನದುದಕ್ಕೂ ಹೋರಾಟ ಮಾಡಿದವರು. ಅವರ ಸೇವೆ ಖಂಡಿತ ವಾಗಿಯೂ ನಿರಂತರವಾಗಿ ಕಾರ್ಮಿಕ ರಿ ಗೆ ಲಭಿಸಬೇಕು.
ReplyDeleteಕೆ.ಎಂ ಸತೀಶ್
ಸಮಾಜವಾದಿ ತತ್ವ ಮೈಗೂಡಿಸಿಕೊಂಡ ಪ್ರಾಮಾಣಿಕ ಹಿರಿಯ ಕಾರ್ಮಿಕರಾದ ಗೌರವಾನ್ವಿತ ಡಿ.ಸಿ.ಮಾಯಣ್ಣನವರು ನನ್ನ ಆತ್ಮೀಯರು.ನಿರಂತರವಾಗಿ ಕಾರ್ಮಿಕರ ಹಿತಚಿಂತರಾಗಿ,ಅವರ ಒಳಿತಿಗಾಗಿ ಶ್ರಮಿಸುತ್ತಿರುವ ಹಿರಿಯ ಅನುಭವಿಗಳು.ಸರಳ, ಸಜ್ಜನರು ಆರೋಗ್ಯದಿಂದಿದ್ದು, ಇನ್ನೂ ಹೆಚ್ಚು ಕಾಲ ಅವರ ಸೇವೆ ಸಮಾಜಕ್ಕೆ ಸಿಗಲೆಂದು ಆಶಿಸುತ್ತೇನೆ.
ReplyDeleteಹೆಚ್.ಎನ್.ಮಹಾರುದ್ರ, ಭದ್ರಾವತಿ.