ಭದ್ರಾವತಿಯಲ್ಲಿ ಯುವಕರ ತಂಡವೊಂದು ಗಾಯಗೊಂಡಿದ್ದ ನಾಗರ ಹಾವಿಗೆ ಚಿಕಿತ್ಸೆ ನೀಡಿ ಅರಣ್ಯಕ್ಕೆ ಬಿಡುವ ಮೂಲಕ ಮಾನವೀಯತೆ ಮರೆದಿರುವ ಘಟನೆ ಬುಧವಾರ ನಡೆದಿದೆ.
ಭದ್ರಾವತಿ, ಜೂ. ೨೩: ನಗರದ ಯುವಕರ ತಂಡವೊಂದು ಗಾಯಗೊಂಡಿದ್ದ ನಾಗರ ಹಾವಿಗೆ ಚಿಕಿತ್ಸೆ ನೀಡಿ ಅರಣ್ಯಕ್ಕೆ ಬಿಡುವ ಮೂಲಕ ಮಾನವೀಯತೆ ಮರೆದಿರುವ ಘಟನೆ ಬುಧವಾರ ನಡೆದಿದೆ.
ಕಾಗದನಗರದ ರಸ್ತೆಯೊಂದರಲ್ಲಿ ಅಪಘಾತದಿಂದ ಗಾಯಗೊಂಡಿದ್ದ ನಾಗರ ಹಾವನ್ನು ರಕ್ಷಿಸಿ ತಕ್ಷಣ ಚಿಕಿತ್ಸೆ ನೀಡುವಲ್ಲಿ ಜಾಸ್ವಾ, ಬೆನ್ಸನ್, ಸತ್ಯ ಮತ್ತು ಭರತ್‌ರಾವ್ ತಂಡ ಯಶಸ್ವಿಯಾಗಿದೆ. ಚೇತರಿಸಿಕೊಂಡ ನಂತರ ಅರಣ್ಯಕ್ಕೆ ಬಿಟ್ಟು ಬಂದಿದ್ದಾರೆ.
No comments:
Post a Comment