ಭದ್ರಾವತಿಯಲ್ಲಿ ಕಡು ಬಡವರಿಗೆ ಸಿದ್ದಪಡಿಸಿದ ಆಹಾರ ವಿತರಿಸುವ ಮೂಲಕ ಸೋಮವಾರ ಸ್ನೇಹ ಜೀವಿ ಬಳಗದ ಅಧ್ಯಕ್ಷ ದಿವಂಗತ ಸತೀಶ್‌ರವರನ್ನು ಸ್ಮರಿಸಲಾಯಿತು.
ಭದ್ರಾವತಿ, ಜೂ. ೭: ಕಡು ಬಡವರಿಗೆ ಸಿದ್ದಪಡಿಸಿದ ಆಹಾರ ವಿತರಿಸುವ ಮೂಲಕ ಸೋಮವಾರ ನಗರದ ಸ್ನೇಹ ಜೀವಿ ಬಳಗದ ಅಧ್ಯಕ್ಷ ದಿವಂಗತ ಸತೀಶ್‌ರವರನ್ನು ಸ್ಮರಿಸಲಾಯಿತು.
ಹಲವಾರು ಸೇವಾ ಕಾರ್ಯಗಳನ್ನು ಮೈಗೂಡಿಸಿಕೊಂಡಿರುವ ಸ್ನೇಹ ಜೀವಿ ಬಳಗವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬರುತ್ತಿದ್ದ ಸತೀಶ್‌ರವರು ಸುಮಾರು ೨ ತಿಂಗಳ ಹಿಂದೆ ನಿಧನ ಹೊಂದಿದ್ದು, ಸ್ಮರಣಾರ್ಥ ಇವರ ಪುತ್ರ ಸುಹಾಸ್ ನ್ಯೂಟೌನ್ ದಯಾ ಸಾಗರ್ ಟ್ರಸ್ಟ್ ವತಿಯಿಂದ ಕೊರೋನಾ ಸೆಮಿ ಲಾಕ್‌ಡೌನ್ ಹಿನ್ನಲೆಯಲ್ಲಿ ಹಸಿವಿನಿಂದ ಬಳಲುತ್ತಿರುವ ಕಡು ಬಡವರಿಗೆ ಸಿದ್ದಪಡಿಸಿದ ಆಹಾರ ವಿತರಿಸಿ ಮಾನವೀಯತೆ ಮೆರೆದರು. ದಯಾ ಸಾಗರ್ ಟ್ರಸ್ಟ್‌ನ ಮೋಸಸ್ ಹಾಗು ಸ್ನೇಹ ಜೀವಿ ಬಳಗದ ಪ್ರಮುಖರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಭಿಕ್ಷುಕರು, ನಿಗರ್ತಿಕರು, ವಿಕಲಚೇತನರು, ಅಸಹಾಯಕರಿಗೆ ಅನ್ನದಾಸೋಹ ಸೇರಿದಂತೆ ಇನ್ನಿತರ ಸೇವಾ ಕಾರ್ಯಗಳನ್ನು ನೆರವೇರಿಸುವ ಉದ್ದೇಶದಿಂದ ದಿವಂಗತ ರೋಶಯ್ಯನವರು ದಯಾಸಾಗರ್ ಟ್ರಸ್ಟ್ ಸ್ಥಾಪಿಸಿದ್ದರು. ಇದೀಗ ಈ ಟ್ರಸ್ಟನ್ನು ರೋಸಯ್ಯನವರ ಪುತ್ರ ಮೋಸಸ್ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.
No comments:
Post a Comment