ಭದ್ರಾವತಿ ನಗರಸಭೆ ವತಿಯಿಂದ ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಹಳೇನಗರದ ಕನಕಮಂಟಪ ಮೈದಾನದಲ್ಲಿ ಪೌರಕಾರ್ಮಿಕರಿಗೆ ಕ್ರೀಡಾಕೂಟ ಆಯೋಜಿಸಲಾಗಿತ್ತು.
ಭದ್ರಾವತಿ, ಸೆ. ೨೨: ನಗರಸಭೆ ವತಿಯಿಂದ ಸೆ.೨೩ರಂದು ಬೆಳಿಗ್ಗೆ ೯ ಗಂಟೆಗೆ ಬಿ.ಎಚ್ ರಸ್ತೆ, ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಪೌರ ಕಾರ್ಮಿಕರ ದಿನಾಚರಣೆ ಹಮ್ಮಿಕೊಳ್ಳಲಾಗಿದೆ.
ಕೋವಿಡ್-೧೯ರ ಹಿನ್ನಲೆಯಲ್ಲಿ ಜಯಂತಿಯನ್ನು ಸರಳವಾಗಿ ಆಚರಿಸಲಾಗುತ್ತಿದ್ದು, ರಂಗಪ್ಪ ವೃತ್ತದಿಂದ ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದ ವರೆಗೂ ಜಾಗೃತಿ ಜಾಥಾ ನಡೆಯಲಿದೆ.
ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಕ್ರೀಡಾಕೂಟ:
ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಪ್ರತಿ ವರ್ಷದಂತೆ ಈ ಬಾರಿ ಸಹ ಹಳೇನಗರದ ಕನಕಮಂಟಪ ಮೈದಾನದಲ್ಲಿ ಪೌರಕಾರ್ಮಿಕರಿಗೆ ಕ್ರೀಡಾಕೂಟ ಆಯೋಜಿಸಲಾಗಿತ್ತು. ನಗರಸಭೆ ಪರಿಸರ ಅಭಿಯಂತರ ಪ್ರಭಾಕರ್ ಕ್ರೀಡಾಕೂಟದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸೇವಾ ಸಂಘದ ತಾಲೂಕು ಅಧ್ಯಕ್ಷ ಎನ್. ಮಂಜುನಾಥ್ ಹಾಗು ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕ್ರೀಡಾಕೂಟದ ವಿಜೇತರು :
ಪುರುಷರ ವಿಭಾಗದಲ್ಲಿ ಶಾಟ್‌ಪುಟ್ ಸ್ಪರ್ಧೆಯಲ್ಲಿ ಸುರೇಶ್ ಮೊದಲನೇ, ಹೊರ ಗುತ್ತಿಗೆ ಚಾಲಕ ಕರೀಗೌಡ ಎರಡನೇ ಹಾಗು ಮನೆ ಮನೆ ಕಸ ಸಂಗ್ರಹಣೆ ಆಟೋ ಸಹಾಯಕ ಕಿರಣ್ ಮೂರನೇ ಮತ್ತು ಮಡಿಕೆ ಒಡೆಯುವ ಸ್ಪರ್ಧೆಯಲ್ಲಿ ಪಿ. ರವಿ ಮೊದಲನೇ, ಮನೆ ಮನೆ ಕಸ ಸಂಗ್ರಹಣೆ ಆಟೋ ಸಹಾಯಕ ಅರವಿಂದ ಎರಡನೇ ಹಾಗು ಚಾಲಕ ಕುಮಾರ್ ಮೂರನೇ ಮತ್ತು ೧೦೦ ಮೀಟರ್ ಓಟ ಸ್ಪರ್ಧೆಯಲ್ಲಿ ಸಹಾಯಕ ಎಸ್. ಶ್ರೀನಿವಾಸ್ ಮೊದಲನೇ, ಅರುಣ್ ಕುಮಾರ್ ಎರಡನೇ ಹಾಗು ಸಹಾಯಕ ಎಸ್. ನಾಗರಾಜ್ ಮೂರನೇ ಬಹುಮಾನ ಪಡೆದುಕೊಂಡರು.
ಮಹಿಳೆಯರ ವಿಭಾಗದಲ್ಲಿ ಮ್ಯೂಜಿಕಲ್ ಛೇರ್ ಸ್ಪರ್ಧೆಯಲ್ಲಿ ಶಾಂತ ಮೊದಲನೇ, ಸತ್ಯಮ್ಮ ಎರಡನೇ ಮತ್ತು ಶಾರದ ಮೂರನೇ, ಶಾಟ್‌ಪುಟ್ ಸ್ಪರ್ಧೆಯಲ್ಲಿ ಮನೆ ಮನೆ ಕಸ ಸಂಗ್ರಹಣೆ ಆಟೋ ಸಹಾಯಕಿ ಸತ್ಯಮ್ಮ ಮೊದಲನೇ, ನಾಗರತ್ನ ಎರಡನೇ ಹಾಗು ಶೌಚಾಲಯ ಸ್ವಚ್ಚತೆಯ ನೇತ್ರಾವತಿ ಮೂರನೇ ಮತ್ತು ಬಾಂಬ್ ಇನ್ ದಿ ಸಿಟಿ ಸ್ಪರ್ಧೆಯಲ್ಲಿ ಇಂದಿರಾ ಮೊದಲನೇ, ಮರಿಯಮ್ಮ ಎರಡನೇ ಮತ್ತು ಶಾಂತಕುಮಾರಿ ಮೂರನೇ ಹಾಗು ೧೦೦ ಮೀಟರ್ ಓಟ ಸ್ಪರ್ಧೆಯಲ್ಲಿ ರಾಜೇಶ್ವರಿ ಮೊದಲನೇ, ಮನೆ ಮನೆ ಕಸ ಸಂಗ್ರಹಣೆ ಆಟೋ ಹೊರ ಗುತ್ತಿಗೆ ಸಹಾಯಕಿ ರೇಣುಕಾ ಎರಡನೇ ಮತ್ತು ನಾಗವೇಣಿ ಮೂರನೇ ಬಹುಮಾನ ಪಡೆದುಕೊಂಡರು.
ಪೌರ ಕಾರ್ಮಿಕರಿಗೆ ರಜೆ : ಸ್ವಚ್ಛತಾ ಕಾರ್ಯ ಇರುವುದಿಲ್ಲ
ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಸರ್ಕಾರ ಸೆ.೨೩ರಂದು ರಜೆ ಘೋಷಿಸಿರುವ ಹಿನ್ನಲೆಯಲ್ಲಿ ಅಂದು ಸ್ವಚ್ಛತಾ ಕಾರ್ಯ ನಡೆಯುವುದಿಲ್ಲ. ಸಾರ್ವಜನಿಕರು ಸಹಕರಿಸುವಂತೆ ಪೌರಾಯುಕ್ತ ಕೆ. ಪರಮೇಶ್ ಕೋರಿದ್ದಾರೆ.
No comments:
Post a Comment