ಭದ್ರಾವತಿ, ಸೆ. ೨೪: ಮೆಸ್ಕಾಂ ಸೀಗೆಬಾಗಿ ೬೬/೧೧ ಕೆವಿ ವಿದ್ಯುತ್ ವಿತರಣಾ ಕೇಂದ್ರದ ಎಸ್.ಎಫ್-೧, ಭದ್ರಾ ಕಾಲೋನಿ ಮತ್ತು ಎಸ್.ಎಫ್-೨, ವೀರಾಪುರ ಫೀಡರ್‌ನ ೧೧ ಕೆ.ವಿ ಮಾರ್ಗ ಮತ್ತು ವಿದ್ಯುತ್ ಕಂಬಗಳ ಸ್ಥಳಾಂತರಿಸುವ ಕಾಮಗಾರಿ ಸೆ.೨೬ರಂದು ಹಮ್ಮಿಕೊಳ್ಳಲಾಗಿದೆ. ಈ ಹಿನ್ನಲೆಯಲ್ಲಿ ಅಂದು ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ೬ ಗಂಟೆವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಕಣಕಟ್ಟೆ, ಭದ್ರಾ ಕಾಲೋನಿ, ಮಜ್ಜಿಗೇನಹಳ್ಳಿ, ಬಾಬಳ್ಳಿ, ಗೌಡರಹಳ್ಳಿ, ಲಕ್ಷ್ಮೀಪುರ, ವೀರಾಪುರ, ಶ್ರೀರಾಮನಗರ, ಸೈಯ್ಯದ್ ಕಾಲೋನಿ, ಸೀಗೆಬಾಗಿ, ಶ್ರೀ ಸತ್ಯಸಾಯಿ ನಗರ ಇತ್ಯಾದಿ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಗ್ರಾಹಕರು ಸಹಕರಿಸುವಂತೆ ಗ್ರಾಮೀಣ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ.
No comments:
Post a Comment