ಕೆ. ನಾರಾಯಣ
ಭದ್ರಾವತಿ, ಸೆ. ೧೯: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರು, ಹಿರಿಯ ಪತ್ರಕರ್ತರಾದ ಕೆ. ನಾರಾಯಣ(೭೮) ಭಾನುವಾರ ನಿಧನ ಹೊಂದಿದರು.
ಪತ್ನಿ, ಇಬ್ಬರು ಪುತ್ರರನ್ನು ಹೊಂದಿದ್ದರು. ಕೆ. ನಾರಾಯಣ ಅವರು ಭುವನವಾರ್ತೆ ಪತ್ರಿಕೆ ಸಂಸ್ಥಾಪಕರ ಸಂಪಾದಕರಾಗಿದ್ದು, ನಂತರ ವಿವಿಧ ದಿನ ಪತ್ರಿಕೆಗಳಲ್ಲಿ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಹಿರಿಯ ಸದಸ್ಯರಾಗಿ ಮಾರ್ಗದರ್ಶಕರಾಗಿದ್ದರು. ಇವರ ನಿಧನಕ್ಕೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಮೌನಾಚರಣೆ ನಡೆಸಿ ಸಂತಾಪ ಸೂಚಿಸಿತು.
ಕೆ. ನಾರಾಯಣರವರು ನಾನು Sr PRO ಅದಾಗ ನಿಂದಲು ಪರಿಚಯ.ಉತ್ತಮ ವಾಗ್ಮಿಮತ್ತು ಹೋರಾಟಗಾರರು.ಮೃತರ ಆತ್ಮಕ್ಕೆ ಚಿರ ಶಾಂತಿ ದೊರಕಲಿ ಎಂದು ಪ್ರಾಥಿಸುತ್ತೇನೆ.
ReplyDeleteಕೆ.ಎಂ. ಸತೀಶ್