ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಮಹಿಳಾ ಘಟಕದ ವತಿಯಿಂದ ಜಿಲ್ಲಾಧ್ಯಕ್ಷೆ ಜ್ಯೋತಿ ಸೋಮಶೇಖರ್ ನೂತನವಾಗಿ ಶಿವಮೊಗ್ಗ ನಗರ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.
ಭದ್ರಾವತಿ, ಅ. ೨೩: ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಮಹಿಳಾ ಘಟಕದ ವತಿಯಿಂದ ಜಿಲ್ಲಾಧ್ಯಕ್ಷೆ ಜ್ಯೋತಿ ಸೋಮಶೇಖರ್ ನೂತನವಾಗಿ ಶಿವಮೊಗ್ಗ ನಗರ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.
ಉಪಾಧ್ಯಕ್ಷರಾಗಿ ಎನ್. ಶೋಭಾ, ಪ್ರಧಾನ ಕಾರ್ಯದರ್ಶಿಯಾಗಿ ಎಂ.ಜೆ ಅನಿತಾ, ಸಂಘಟನಾ ಕಾರ್ಯದರ್ಶಿಯಾಗಿ ಕಲಾವತಿ, ನಗರ ಕಾರ್ಯದರ್ಶಿಯಾಗಿ ಭವಾನಿ ಹಾಗು ಸಹ ಕಾರ್ಯದರ್ಶಿಯಾಗಿ ವೀಣಾ ಅವರನ್ನು ನೇಮಕ ಮಾಡಲಾಯಿತು.
ಶಿವಮೊಗ್ಗ ಗಾಂಧಿ ಬಜಾರ್ ಮಹಿಳಾ ಘಟಕದ ಅದ್ಯಕ್ಷರಾಗಿ ಪರಿಮಳ, ಉಪಾಧ್ಯಕ್ಷರಾಗಿ ಶಾಂತ, ಪ್ರಧಾನ ಕಾರ್ಯದರ್ಶಿಯಾಗಿ ಶಕುಂತಳಾ ಹಾಗೂ ಸಂಘಟನಾ ಕಾರ್ಯದರ್ಶಿಯಾಗಿ ರೇಖಾ ಮತ್ತು ಸಹ ಕಾರ್ಯದರ್ಶಿಯಾಗಿ ರಾಧಿಕಾ ರವರನ್ನು ಆಯ್ಕೆ ಮಾಡಲಾಯಿತು.
ವೇದಿಕೆಯಲ್ಲಿ ಶಿವಮೊಗ್ಗ ನಗರ ಅಧ್ಯಕ್ಷೆ ಜ್ಯೋತಿ ರಂಗನಾಥ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾರದಾ, ಭದ್ರಾವತಿ ತಾಲೂಕು ಮಹಿಳಾ ಅಧ್ಯಕ್ಷೆ ಮಹೇಶ್ವರಿ, ಕುಮಾರ್, ರೇಖಾ, ನಾಗರತ್ನ, ಶಾಂತಿ, ಅನಿತಾ, ಎನ್. ಭಾಗ್ಯ, ಸುಧಾ, ಸುಜಾತ, ಹರೀಶ್, ಅನಿತಾ, ಪ್ರಸಾದ್, ಕುಸುಮ, ವೀಣಾ, ಎಂ.ಟಿ ರೇಖಾ, ಮಂಜುಳಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment