ಭದ್ರಾವತಿ ಅನ್ವರ್ ಕಾಲೋನಿಯ ಉಸ್ಮಾನಿಯ ಚಾರಿಟಬಲ್ ಟ್ರಸ್ಟ್ ವತಿಯಿಂದ ಸಾರ್ವಜನಿಕರ ಉಚಿತ ಆರೋಗ್ಯ ಸೇವೆಗಾಗಿ ಅಂಬ್ಯುಲೆನ್ಸ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಮಂಗಳವಾರ ಶಾಸಕ ಬಿ.ಕೆ ಸಂಗಮೇಶ್ವರ್ ನೂತನ ಅಂಬ್ಯುಲೆನ್ಸ್ ಕಾರ್ಯಾರಂಭಕ್ಕೆ ಚಾಲನೆ ನೀಡಿದರು.
ಭದ್ರಾವತಿ: ನಗರದ ಅನ್ವರ್ ಕಾಲೋನಿಯ ಉಸ್ಮಾನಿಯ ಚಾರಿಟಬಲ್ ಟ್ರಸ್ಟ್ ವತಿಯಿಂದ ಸಾರ್ವಜನಿಕರ ಉಚಿತ ಆರೋಗ್ಯ ಸೇವೆಗಾಗಿ ಅಂಬ್ಯುಲೆನ್ಸ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಮಂಗಳವಾರ ಶಾಸಕ ಬಿ.ಕೆ ಸಂಗಮೇಶ್ವರ್ ನೂತನ ಅಂಬ್ಯುಲೆನ್ಸ್ ಕಾರ್ಯಾರಂಭಕ್ಕೆ ಚಾಲನೆ ನೀಡಿದರು.
ಟ್ರಸ್ಟ್ ವತಿಯಿಂದ ಹಲವಾರು ವರ್ಷಗಳಿಂದ ಸಾರ್ವಜನಿಕರ ಉಚಿತ ಆರೋಗ್ಯ ಸೇವೆಗಾಗಿ ಅಂಬ್ಯುಲೆನ್ಸ್ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗಿದೆ. ಈ ಹಿಂದೆ ಖರೀದಿಸಲಾಗಿದ್ದ ಅಂಬ್ಯುಲೆನ್ಸ್ ಹಳೇಯದಾಗಿದ್ದು, ಬಳಕೆಗೆ ಉಪಯೋಗಕ್ಕೆ ಬಾರದ ಕಾರಣ ಪುನಃ ಹೊಸ ಅಂಬ್ಯುಲೆನ್ಸ್ ಖರೀದಿಸಲಾಗಿದೆ.
ಪ್ರವಾದಿ ಮಹಮ್ಮದ್ ಫೈಗಂಬರರ ಜನ್ಮದಿನದ ಅಂಗವಾಗಿ ಟ್ರಸ್ಟ್ ಹೊಸ ಅಂಬ್ಯುಲೆನ್ಸ್ ಸೇವೆಯನ್ನು ಸಮರ್ಪಣೆ ಮಾಡಿಕೊಂಡಿದೆ. ಧರ್ಮಗುರುಗಳ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಉಪಾಧ್ಯಕ್ಷ ಚನ್ನಪ್ಪ, ನಗರಸಭಾ ಸದಸ್ಯ ಆರ್. ಶ್ರೇಯಸ್(ಚಿಟ್ಟೆ), ನಗರ ಪೊಲೀಸ್ ವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆ, ಟ್ರಸ್ಟ್ ಅಧ್ಯಕ್ಷ ಹಬಿಬುಲ್ಲಾ ಖಾನ್, ಉಪಾಧ್ಯಕ್ಷ ಮೆಹಬೂಬ್ ಪಾಷ, ಮಾಜಿ ಅಧ್ಯಕ್ಷ ಜೆಬಿಟಿ ಬಾಬು, ಖಜಾಂಚಿ ನೂರುಲ್ಲಾ ಷರೀಫ್, ಕಾರ್ಯದರ್ಶಿ ಮುಸ್ವೀರ್ ಬಾಷಾ, ಟ್ರಸ್ಟಿಗಳಾದ ಅಬ್ದುಲ್ ವಹೀದ್, ಮೊಹಮದ್ ಅನ್ಸರ್ ಪಾಷಾ, ಸೈಯದ್ ಸಮೀವುಲ್ಲಾ, ಎಸ್.ಎಂ ಮುಜೀಬ್‌ಉಲ್ಲಾ, ನೂರ್ ಅಹಮದ್, ಮೊಹಮದ್ ಖಲಂದರ್, ಮೊಹಮದ್ ಜಾಕೀರ್, ಸೈಯದ್ ಅಸ್ಲಂ, ಪ್ರಮುಖರಾದ ಸಿ.ಎಂ ಖಾದರ್, ಪ್ರಕಾಶ್‌ರಾವ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment