ಭದ್ರಾವತಿ ವಿವೇಕಾನಂದ ಯೋಗ ಟ್ರಸ್ಟ್‌ನ ಡಿ. ನಾಗರಾಜ್ ಅವರ ಯೋಗ ಕ್ಷೇತ್ರದಲ್ಲಿನ ೪ ದಶಕದ ಸಾಧನೆಯನ್ನು ಗುರುತಿಸಿ ರಾಷ್ಟ್ರೀಯ ಯೋಗಿ-ಯೋಗ ಆವಾರ್ಡ್ ನೀಡಿ ಗೌರವಿಸಲಾಗಿದೆ.
ಭದ್ರಾವತಿ, ಅ. ೧೧: ಆನ್‌ಲೈನ್ ಮೂಲಕ ಬೆಂಗಳೂರಿನ ನಾಗರಭಾವಿಯ ಸೆಂಟ್ ಸೋಫಿಯಾ ಕಾನ್ವೆಂಟ್ ಹೈಸ್ಕೂಲ್‌ನಲ್ಲಿ ನಡೆದ ಗ್ಲೋಬಲ್ ವರ್ಲ್ಡ್ ರೆಕಾರ್ಡ್ ಹಾಗು ರಾಷ್ಟ್ರೀಯ ಯೋಗಿ-ಯೋಗ ಆವಾರ್ಡ್-೨೦೨೧ ಸ್ಪರ್ಧೆಯಲ್ಲಿ ನಗರದ ವಿವೇಕಾನಂದ ಯೋಗ ಟ್ರಸ್ಟ್‌ನ ಡಿ. ನಾಗರಾಜ್ ಪ್ರಾಸಾರಿತ ಪಾದೋತ್ತಾಸನದ ಯೋಗ ಭಂಗಿಯಲ್ಲಿ ೫ ನಿಮಿಷ ಮಾಡಿ ಗ್ಲೋಬಲ್ ವರ್ಲ್ಡ್ ರೆಕಾರ್ಡ್ ಮಾಡಿದ್ದಾರೆ.
ಯೋಗ ಕ್ಷೇತ್ರದಲ್ಲಿನ ನಾಗರಾಜ್ ಅವರ ೪ ದಶಕದ ಸಾಧನೆಯನ್ನು ಗುರುತಿಸಿ ರಾಷ್ಟ್ರೀಯ ಯೋಗಿ-ಯೋಗ ಆವಾರ್ಡ್ ನೀಡಿ ಗೌರವಿಸಲಾಗಿದೆ.
ಗ್ಲೋಬಲ್ ವರ್ಲ್ಡ್ ರೆಕಾರ್ಡ್ ಡೈರೆಕ್ಟರ್ ಡಾ. ಸುಬ್ರಮಣಿ, ಸಂಯೋಜಕ ಡಾ. ಕಮಲ್‌ಕಣ್ಣನ್, ಉಪಾಧ್ಯಕ್ಷ ಡಾ. ಮುರುಗನ್, ಯೋಗ ಮಹಾದೇವಾ ಹಾಗು ಡಾ. ಶಿವಪ್ರಕಾಶ್ ಮತ್ತು ಸೋಪಿಯಾ ಕಾನ್ವೆಂಟ್ ಹೈಸ್ಕೂಲ್ ಪ್ರಾಂಶುಪಾಲೆ ಡಾ. ಕಲ್ಪನಾ ಶ್ರೀನಿವಾಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಸ್ಪರ್ಧೆಯಲ್ಲಿ ಭಾರತ, ಥೈಲ್ಯಾಂಡ್, ಮಲೇಷಿಯಾ, ಶ್ರೀಲಂಕಾ ಮತ್ತು ವಿಯೆಟ್ನಾಂ ಸೇರಿದಂತೆ ವಿವಿಧ ರಾಷ್ಟ್ರಗಳಿಂದ ಸುಮಾರು ೪೭೭ ಯೋಗಪಟುಗಳು ಭಾಗವಹಿಸಿದ್ದರು.
No comments:
Post a Comment