ಅಧ್ಯಕ್ಷೆ ಗಂಗಮ್ಮ, ಉಪಾಧ್ಯಕ್ಷೆ ಪವಿತ್ರ ಜಿ. ಮಂಜುನಾಥ್ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟನೆ
ಭದ್ರಾವತಿ ಹಿರಿಯೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು, ಸದಸ್ಯರು ಹಾಗು ಗ್ರಾಮದ ಕೆಲವು ಮುಖಂಡರು ಹಾಲಿ ಸದಸ್ಯರ ಮೇಲೆ ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾಗಿವೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಂಗಮ್ಮ, ಉಪಾಧ್ಯಕ್ಷೆ ಪವಿತ್ರ ಜಿ ಮಂಜುನಾಥ್ ಹಾಗು ಸದಸ್ಯರು ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.
ಭದ್ರಾವತಿ, ಅ. ೫: ಹಿರಿಯೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು, ಸದಸ್ಯರು ಹಾಗು ಗ್ರಾಮದ ಕೆಲವು ಮುಖಂಡರು ಹಾಲಿ ಸದಸ್ಯರ ಮೇಲೆ ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾಗಿವೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಂಗಮ್ಮ, ಉಪಾಧ್ಯಕ್ಷೆ ಪವಿತ್ರ ಜಿ ಮಂಜುನಾಥ್ ಹಾಗು ಸದಸ್ಯರು ಸ್ಪಷ್ಟಪಡಿಸಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಹಿಂದೆ ಗ್ರಾಮ ಪಂಚಾಯಿತಿಯಲ್ಲಿ ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿರುವ ಮಧುಸೂದನ್‌ರವರು ನಮ್ಮ ಅವಧಿಯಲ್ಲಿ ಕೇವಲ ೫ ರಿಂದ ೬ ತಿಂಗಳು ಮಾತ್ರ ಕರ್ತವ್ಯ ನಿರ್ವಸಿದ್ದು, ಹಿಂದಿನ ಸದಸ್ಯರ ಅವಧಿಯಲ್ಲಿಯೇ ಸುಮಾರು ೩ ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿರುತ್ತಾರೆ. ಅಂದು ಮಧುಸೂದನ್ ಅವರ ಬಗ್ಗೆ ಭ್ರಷ್ಟಾಚಾರ ಆರೋಪ ಮಾಡದೆ ಇದೀಗ ಆರೋಪ ಮಾಡುತ್ತಿರುವುದು ಹಾಸ್ಯಾಸ್ಪದ ಸಂಗತಿಯಾಗಿದೆ ಎಂದರು.
ನಾವು ಗ್ರಾಮ ಪಂಚಾಯಿತಿ ಆಡಳಿತ ಯಾವ ರೀತಿ ನಡೆಸಬೇಕು. ನಡವಳಿ ಹೇಗೆ ಸಿದ್ದಪಡಿಸಬೇಕು. ಇತ್ಯಾದಿ ವಿಚಾರಗಳ ಬಗ್ಗೆ ತರಬೇತಿ ಪಡೆದಿದ್ದೇವೆ. ನಾವು ನಮ್ಮ ಗಂಡಂದಿರು ಅಥವಾ ಬೇರೆಯವರ ನೆರವಿಲ್ಲದೆ ಸಮರ್ಥವಾಗಿ ಆಡಳಿತ ನಿರ್ವಹಿಸುವ ಸಾಮರ್ಥ್ಯ ಹೊಂದಿದ್ದೇವೆ. ಈ ಹಿಂದಿನ ಸದಸ್ಯರು ಮಾಡಿರುವ ಆರೋಪದಂತೆ ನಮ್ಮ ಗಂಡಂದಿರು ಪಂಚಾಯಿತಿ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ ಎಂದರು.
೧೪ನೇ ಹಣಕಾಸು ಯೋಜನೆ ಮತ್ತು ವರ್ಗ-೧ರಲ್ಲಿ ಅವರ ಅವಧಿಯಲ್ಲಿಯೇ ಅನುದಾನ ಬಿಡುಗಡೆಗೊಂಡಿದ್ದು, ಈ ಅವಧಿಯಲ್ಲಿ ನಡೆದಿರುವ ಭ್ರಷ್ಟಾಚಾರವನ್ನು ಹಾಲಿ ಸದಸ್ಯರ ಮೇಲೆ ಮಾಡುತ್ತಿರುವುದು ಹಾಸ್ಯಾಸ್ಪದ ಸಂಗತಿಯಾಗಿದೆ. ಅಲ್ಲದೆ ಅಕ್ರಮ ಖಾತೆ ಸಂಬಂಧ ಮಾಡಿರುವ ಆರೋಪ ಸಹ ಇವರ ಅವಧಿಯಲ್ಲಿಯೇ ನಡೆದಿದ್ದು, ಅವರ ಅವಧಿಯಲ್ಲಿ ಪ್ರಶ್ನಿಸದೆ ಇದೀಗ ಆರೋಪ ಮಾಡುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದರು.
ಸದಸ್ಯರಾದ ಅನಿತ ಚಂದ್ರ, ರಾಮಮೂರ್ತಿ, ನಾಗವೇಣಿ, ಎಲ್. ಕೃಷ್ಣೇಗೌಡ, ಪಲ್ಲವಿ ಎಚ್.ಎಸ್ ಮಲ್ಲಿಕಾರ್ಜುನ , ಕಿರಣ್ ರಾಜ್ ಮತ್ತು ಸಂತೋಷ್ ಉಪಸ್ಥಿತರಿದ್ದರು.
No comments:
Post a Comment