ಕುಟುಂಬದ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ
ಮೂಲತಃ ಭದ್ರಾವತಿಯವರಾದ ಪ್ರಸ್ತುತ ಲಂಡನ್‌ನಲ್ಲಿ ವಾಸವಿರುವ ಪುನೀತ್ ಮತ್ತು ರಾಧಿಕಾ ದಂಪತಿ ತಮ್ಮ ಮಗುವಿಗೆ ತವರು ನೆಲದಲ್ಲಿ ಲಿಂಗಾಯಿತ ಧರ್ಮದಂತೆ ನಾಮಕರಣ ಕಾರ್ಯವನ್ನು ಶಿವಮೊಗ್ಗ ಬಸವಕೇಂದ್ರದ ಶ್ರೀ ಬಸವ ಮರುಳಸಿದ್ದ ಸ್ವಾಮೀಜಿಯವರ ನೇತೃತ್ವದಲ್ಲಿ ನೆರವೇರಿಸುವ ಮೂಲಕ ಎಲ್ಲರ ಗಮನ ಸೆಳೆದರು.
ಭದ್ರಾವತಿ, ನ. ೧೬: ಮಗು ವಿದೇಶದಲ್ಲಿ ಜನಿಸಿದರೂ ಸಹ ಲಿಂಗಾಯಿತ ಧರ್ಮದಂತೆ ನಾಮಕರಣ ಶಾಸ್ತ್ರ ನೆರವೇರಿಸುವ ಮೂಲಕ ಹುಟ್ಟಿದ ನೆಲದ ಧರ್ಮಕ್ಕೆ ಚಿರ ಋಣಿಯಾಗಿರುವ ಕುಟುಂಬವೊಂದರ ಕಾರ್ಯ ಇದೀಗ ಎಲ್ಲರ ಗಮನ ಸೆಳೆದಿದೆ.
ಹೊಸಮನೆ ನಿವಾಸಿ ಪ್ರೇಮಪ್ರಸಾದ್ ಹಾಗೂ ಶಿವಲೀಲಾ ದಂಪತಿ ಪುತ್ರ ಪುನೀತ್ ಮತ್ತು ಸೊಸೆ ರಾಧಿಕಾ ಕಳೆದ ಕೆಲವು ವರ್ಷಗಳಿಂದ ಲಂಡನ್‌ನಲ್ಲಿ ವಾಸವಾಗಿದ್ದು, ೬ ತಿಂಗಳ ಹಿಂದೆ ಹೆಣ್ಣು ಮಗು ಜನಿಸಿದೆ. ಈ ಮಗುವಿಗೆ ಲಿಂಗಾಯಿತ ಧರ್ಮದಂತೆ ನಾಮಕರಣ ಮಾಡಬೇಕೆಂಬ ಬಯಕೆಯೊಂದಿದ್ದ ಈ ದಂಪತಿ ತವರು ದೇಶ ಭಾರತಕ್ಕೆ ಆಗಮಿಸಿ ತಮ್ಮ ಬಯಕೆಯನ್ನು ಈಡೇರಿಸಿಕೊಂಡಿದ್ದಾರೆ.
ಹಳೇನಗರದ ಶ್ರೀ ಅಕ್ಕಮಹಾದೇವಿ ಸಮುದಾಯಭವನದಲ್ಲಿ ಆಯೋಜಿಸಲಾಗಿದ್ದ ಶುಭ ಸಮಾರಂಭದಲ್ಲಿ ಶಿವಮೊಗ್ಗ ಬಸವಕೇಂದ್ರದ ಶ್ರೀ ಬಸವ ಮರುಳಸಿದ್ದ ಸ್ವಾಮೀಜಿಯವರು ಲಿಂಗಾಯಿತ ಧರ್ಮದಂತೆ ಲಿಂಗಧಾರಣಾ ಮತ್ತು ನಾಮಕರಣ ನೆರವೇರಿಸಿಕೊಟ್ಟರು. ಲಂಡನ್ ಪ್ರಜೆಯಾಗಿರುವ ಹೆಣ್ಣು ಮಗುವಿಗೆ ನಿಧಿ ಎಂಬ ಹೆಸರನ್ನು ನಾಮಕರಣಗೊಳಿಸಲಾಗಿದ್ದು, ಕುಟುಂಬ ಸಂಬಂಧಿಕರು, ಹಿತೈಷಿಗಳು, ಸ್ನೇಹಿತರು ಸಮಾರಂಭದಲ್ಲಿ ಪಾಲ್ಗೊಂಡು ಮಗುವಿಗೆ ಶುಭ ಹಾರೈಸಿದರು.
No comments:
Post a Comment