ಶಾರದ ಕಾರಂತ್
ಭದ್ರಾವತಿ, ಡಿ. ೨೯: ನಗರಸಭೆ ವಾರ್ಡ್ ನಂ.೨, ಬಿ.ಎಚ್ ರಸ್ತೆ ನಿವಾಸಿ ಶಾರದ ಕಾರಂತ್(೬೮) ಬುಧವಾರ ನಿಧನ ಹೊಂದಿದರು.
ಶಾರದ ಅವರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಿಎಸ್‌ಎನ್‌ಎಲ್ ಮಳಿಗೆಯ ಗಣೇಶ್ ಕಾರಂತ್ ಸೇರಿದಂತೆ ೩ ಗಂಡು ಹಾಗು ೩ ಹೆಣ್ಣು ಮಕ್ಕಳನ್ನು ಹೊಂದಿದ್ದರು. ಮೃತರ ಅಂತ್ಯಕ್ರಿಯೆ ಹುತ್ತಾ ಕಾಲೋನಿ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು. ಮೃತರ ನಿಧನಕ್ಕೆ ನಗರದ ಅನೇಕ ನಗರದ ಗಣ್ಯರು ಸಂತಾಪ ಸೂಚಿಸಿದ್ದಾರೆ.
No comments:
Post a Comment