ಭದ್ರಾವತಿ ನ್ಯೂಟೌನ್ ಕಾರ್ಮಿಕರ ಭವಿಷ್ಯ ನಿಧಿ ಚಂದಾದಾರರ ಮತ್ತು ಪಿಂಚಣಿದಾರರ ಕ್ಷೇಮಾಭಿವೃದ್ಧಿ ಸಂಘದ ಸಭೆಯಲ್ಲಿ ಕಾಮ್ರೇಡ್ ಕಾಳೇಗೌಡರನ್ನು ಸನ್ಮಾನಿಸಿ ಗೌರವಿಸಲಾಯಿತು.
ಭದ್ರಾವತಿ, ಡಿ. ೬: ನಗರದ ನ್ಯೂಟೌನ್ ಕಾರ್ಮಿಕರ ಭವಿಷ್ಯ ನಿಧಿ ಚಂದಾದಾರರ ಮತ್ತು ಪಿಂಚಣಿದಾರರ ಕ್ಷೇಮಾಭಿವೃದ್ಧಿ ಸಂಘದ ಸಭೆ ಯಶಸ್ವಿಯಾಗಿ ಜರುಗಿತು.
ಸಭೆಯಲ್ಲಿ ಪಿಂಚಣಿ ಮತ್ತು ಭವಿಷ್ಯ ನಿಧಿ ವಿಚಾರಗಳಿಗೆ ಸಂಬಂಧಿಸಿದಂತೆ ಚರ್ಚಿಸಲಾಯಿತು. ೨೦೦೪-೦೫ನೇ ಸಾಲಿನಲ್ಲಿ ಆರಂಭಗೊಂಡ ಸಂಘ ಭವಿಷ್ಯ ನಿಧಿ ಚಂದಾದಾರರ ಮತ್ತು ಪಿಂಚಣಿದಾರರ ಹಿತ ಕಾಪಾಡುವಲ್ಲಿ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರುತ್ತಿದೆ.
ಕಾಮ್ರೇಡ್ ಕಾಳೇಗೌಡರವರು ಕಾರ್ಮಿಕರಿಗಾಗಿ ನಡೆಸಿರುವ ಹೋರಾಟಗಳು ಹಾಗು ಅವರು ನಡೆದು ಬಂದ ದಾರಿ ಹಾಗು ಚಿಂತನೆಗಳನ್ನು ಸಭೆಯಲ್ಲಿ ನೆನಪಿಕೊಳ್ಳುವ ಮೂಲಕ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ದುಗ್ಗೇಗೌಡ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ನರಸಿಂಹಚಾರ್, ಚಂದ್ರಕಾಂತ್, ನಾಗರಾಜ್, ಈಶ್ವರಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ರಾಮಮೂರ್ತಿ ವಂದಿಸಿದರು.
No comments:
Post a Comment