ಭದ್ರಾವತಿ, ಡಿ. ೧೯: ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಗೆ ೬ ಮಂದಿಯನ್ನು ನೂತನ ಸದಸ್ಯರಾಗಿ ಸರ್ಕಾರ ನಾಮನಿರ್ದೇಶನಗೊಳಿಸಿ ಆದೇಶ ಹೊರಡಿಸಿದೆ.
ಪರಿಶಿಷ್ಟ ಜಾತಿಯಿಂದ ಹೊಸಮನೆ ಭೋವಿ ಕಾಲೋನಿ ನಿವಾಸಿ ಪಿ. ಗಣೇಶ್‌ರಾವ್, ಮಹಿಳಾ ಸ್ಥಾನದಿಂದ ಹೊಸಮನೆ ಶಿವಾಜಿ ಸರ್ಕಲ್ ನಿವಾಸಿ ಅನುಷಾ, ಸಾಮಾನ್ಯ ವಿಭಾಗದಿಂದ ಹೊಸಮನೆ ಎನ್‌ಎಂಸಿ ನಿವಾಸಿಗಳಾದ ವಿ. ರಾಮನಾಥ್, ಬಿ.ಎಸ್ ಶ್ರೀನಾಥ್, ನ್ಯೂಟೌನ್ ಆಂಜನೇಯ ಅಗ್ರಹಾರ ನಿವಾಸಿ ಎಚ್. ರಘುರಾವ್ ಮತ್ತು ಅಣ್ಣಾನಗರದ ನಿವಾಸಿ ಪಿ. ಕೃಷ್ಣಮೂರ್ತಿ ಅವರನ್ನು ರಾಜ್ಯಪಾಲರ ನಿರ್ದೇಶನ ಮೇರೆಗೆ ನಾಮನಿರ್ದೇಶನಗೊಳಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧೀನ ಕಾರ್ಯದರ್ಶಿ ವಿ. ಪದ್ಮ ಆದೇಶ ಹೊರಡಿಸಿದ್ದಾರೆ.
No comments:
Post a Comment