ಭಾವಸಾರ್ ವಿಷನ್ ಇಂಡಿಯಾ ಏರಿಯಾ-೧೦೩ರ ಅಧ್ಯಕ್ಷರಾಗಿ ಆಶಾ ದುಗ್ಗೇಶ್ ತೇಲ್ಕರ್
ಭದ್ರಾವತಿ ರೋಟರಿ ಕ್ಲಬ್ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಭಾವಸಾರ್ ವಿಷನ್ ಇಂಡಿಯಾ ಏರಿಯಾ-೧೦೩ ತಾಲೂಕು ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ನೂತನ ಅಧ್ಯಕ್ಷರಾಗಿ ಆಶಾ ದುಗ್ಗೇಶ್ ತೇಲ್ಕರ್ ಪ್ರಮಾಣ ವಚನ ಸ್ವೀಕರಿಸಿದರು.
ಭದ್ರಾವತಿ, ಜ. ೨೮: ಭಾವಸಾರ್ ಕ್ಷತ್ರಿಯಾ ಸಮಾಜದವರು ತಮ್ಮ ಸಮಾಜದ ಹಿನ್ನಲೆಯನ್ನು ಅರಿತುಕೊಂಡಾಗ ಮಾತ್ರ ಅದರ ವೈಭವವನ್ನು ಮುಖ್ಯವಾಹಿನಿಗೆ ತರಲು ಸಾಧ್ಯ ಎಂದು ಭಾವಸಾರ್ ವಿಷನ್ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷ ಸತೀಶ್ ಎಂ ಜಾಧವ್ ಹೇಳಿದರು.
ಅವರು ಶುಕ್ರವಾರ ರೋಟರಿ ಕ್ಲಬ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಭಾವಸಾರ್ ವಿಷನ್ ಇಂಡಿಯಾ ಏರಿಯಾ-೧೦೩ ತಾಲೂಕು ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಭಾವಸಾರ್ ಕ್ಷತ್ರಿಯಾ ಸಮಾಜದವರು ಪ್ರಸ್ತುತ ವಿವಿಧ ವೃತ್ತಿ ಕ್ಷೇತ್ರಗಳಲ್ಲಿ ಹರಿದು ಹಂಚಿಹೋಗಿದ್ದು, ಇದರಿಂದಾಗಿ ಬಹಳಷ್ಟು ಮಂದಿ ಸಮಾಜದ ಸಂಘಟನೆಯಿಂದ ದೂರ ಉಳಿದುಕೊಂಡಿದ್ದಾರೆ. ಇದೀಗ ಎಲ್ಲರನ್ನು ಒಗ್ಗೂಡಿಸಿ ಸಮಾಜವನ್ನು ಮುನ್ನಡೆಸಿಕೊಂಡು ಹೋಗುವ ಅನಿವಾರ್ಯತೆ ಎದುರಾಗಿದೆ. ಎಲ್ಲರೂ ಸೇವಾ ಮನೋಭಾವನೆ ರೂಢಿಸಿಕೊಳ್ಳುವ ಜೊತೆಗೆ ಸಮಾಜಕ್ಕೆ ತಮದೇ ಆದ ಕೊಡುಗೆಗಳನ್ನು ನೀಡುವಂತಾಗಬೇಕೆಂದರು.
ನೂತನ ಅಧ್ಯಕ್ಷರಾಗಿ ಆಶಾ ದುಗ್ಗೇಶ್ ತೇಲ್ಕರ್:
ಭಾವಸಾರ್ ವಿಷನ್ ಇಂಡಿಯಾ ಏರಿಯಾ-೧೦೩ರ ತಾಲೂಕು ನೂತನ ಅಧ್ಯಕ್ಷರಾಗಿ ಆಶಾ ದುಗ್ಗೇಶ್ ತೇಲ್ಕರ್ ಮತ್ತು ಕಾರ್ಯದರ್ಶಿಯಾಗಿ ಮಮತ ವಿಠಲ್‌ನಾಥ್ ಹಾಗು ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು. ಗೌರ್‍ನರ್ ಕೆ.ಎನ್ ಮಂಜುನಾಥರಾವ್ ಬಂಗ್ರೆ ಅಧಿಕಾರ ಪ್ರಮಾಣ ವಚನ ಬೋಧಿಸಿದರು.
ಉಪಗೌರ್‍ನರ್ ಡಿ.ಬಿ ವಿನಯ್‌ಕುಮಾರ್, ಸ್ಮಾರ್ಟ್ ವಿಷನ್ ಛೇರ್‍ಮನ್ ಗಜೇಂದ್ರನಾಥ್ ಮಾಲೋಡೆ, ಭಾವಸಾರ್ ಕ್ಷತ್ರಿಯಾ ಸಮಾಜ ಅಧ್ಯಕ್ಷ ಡಿ.ಎಚ್ ರಾಘವೇಂದ್ರರಾವ್, ಡಿ.ಟಿ ಶ್ರೀಧರ್, ಶಿವಮೊಗ್ಗ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ದುಗ್ಗೇಶ್ ತೇಲ್ಕರ್, ಲಕ್ಷ್ಮಿಕಾಂತ್ ಗುಜ್ಜರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ನಿಕಟಪೂರ್ವ ಅಧ್ಯಕ್ಷ ಶಂಕರ್ ಜಿಂಗಾಡೆ ಸ್ವಾಗತಿಸಿದರು. ಸಮಾರಂಭದಲ್ಲಿ ಭಾವಸಾರ್ ವಿಷನ್ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷ ಸತೀಶ್ ಎಂ. ಜಾಧವ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಭದ್ರಾವತಿ ರೋಟರಿ ಕ್ಲಬ್ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಭಾವಸಾರ್ ವಿಷನ್ ಇಂಡಿಯಾ ಏರಿಯಾ-೧೦೩ ತಾಲೂಕು ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಭಾವಸಾರ್ ವಿಷನ್ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷ ಸತೀಶ್ ಎಂ ಜಾಧವ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
No comments:
Post a Comment