Wednesday, January 12, 2022

ಕಾಗದನಗರ ಆಂಗ್ಲಶಾಲೆಯಲ್ಲಿ ಸೈಬರ್ ಅಪರಾಧ ಕುರಿತು ಜಾಗೃತಿ ಕಾರ್ಯಕ್ರಮ


ಭದ್ರಾವತಿ ಕಾಗದನಗರ ಆಂಗ್ಲಶಾಲೆಯಲ್ಲಿ ಶಿವಮೊಗ್ಗ ಸಿಇಎನ್ ಮತ್ತು ಅಪರಾಧ ಪೊಲೀಸ್ ಠಾಣೆ ವತಿಯಿಂದ ಸೈಬರ್ ಅಪರಾಧಗಳ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ, ಜ. ೧೨: ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳು ಹೆಚ್ಚಾಗುತ್ತಿದ್ದು, ಈ ಹಿನ್ನಲೆಯಲ್ಲಿ ಸೈಬರ್ ಅಪರಾಧ ಕುರಿತು ಶಾಲಾ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ಶಿವಮೊಗ್ಗ ಸಿಇಎನ್ ಮತ್ತು ಅಪರಾಧ ಪೊಲೀಸ್ ಠಾಣೆ ತೊಡಗಿಸಿಕೊಂಡಿದೆ.
    ಬುಧವಾರ ನಗರದ ಕಾಗದನಗರ ಆಂಗ್ಲ ಶಾಲೆಯಲ್ಲಿ ಠಾಣೆಯ ಇನ್ಸ್‌ಪೆಕ್ಟರ್ ಕೆ.ಟಿ ಗುರುರಾಜ್ ಮಾರ್ಗದರ್ಶನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಠಾಣೆಯ ಸಿಬ್ಬಂದಿ ನಿರ್ಮಲ ವಿದ್ಯಾರ್ಥಿಗಳಿಗೆ ಸೈಬರ್ ಅಪರಾಧಗಳ ಕುರಿತು ಮಾಹಿತಿ ನೀಡಿ ಜಾಗೃತಿ ಮೂಡಿಸಿದರು.
    ಅಲ್ಲದೆ ಹೆಣ್ಣು ಮಕ್ಕಳ ಮೇಲಿನ ಲೈಂಗಿಕ ದೌರ್ಜನಗಳ ಬಗ್ಗೆವಿವರಿಸಿ ಹೆಣ್ಣು ಮಕ್ಕಳು ವಹಿಸಬೇಕಾದ ಮುನ್ನಚ್ಚರಿಕೆ ಕ್ರಮಗಳನ್ನು ತಿಳಿಸಿಕೊಟ್ಟರು. ಶಾಲೆಯ ಪ್ರಾಂಶುಪಾಲ ಆರ್. ಸತೀಶ್ ಅಧ್ಯಕ್ಷತೆ ವಹಹಿಸಿದ್ದರು. ಶಿಕ್ಷಕರಾದ ಸಿದ್ದಯ್ಯ, ಮಾರುತಿಕುಮಾರ್ ಮತ್ತು ಎಂ.ಸಿ ಗೋಪಾಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಉಪಪ್ರಾಂಶುಪಾಲ ಡಿ. ನಾಗರಾಜ್ ಸ್ವಾಗತಿಸಿದರು. ಮಮತ ವಂದಿಸಿದರು.

No comments:

Post a Comment