ಭದ್ರಾವತಿಗೆ ಭಾನುವಾರ ಆಗಮಿಸಿದ ಬಡವ ರಾಸ್ಕಲ್ ಚಿತ್ರದ ನಟ ಡಾಲಿ ಧನಂಜಯ ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರ ನಿವಾಸಕ್ಕೆ ಭೇಟಿ ನೀಡಿದರು.
ಭದ್ರಾವತಿ, ಜ. ೨: ಕಳೆದ ವಾರ ಬಿಡುಗಡೆಯಾದ ಬಡವ ರಾಸ್ಕರ್ ಚಿತ್ರದ ನಟ ಡಾಲಿ ಧನಂಜಯ ಭಾನುವಾರ ಚಿತ್ರದ ಪ್ರಚಾರಕ್ಕೆ ಸಿ.ಎನ್ ರಸ್ತೆಯಲ್ಲಿರುವ ನೇತ್ರಾವತಿ ಚಿತ್ರಮಂದಿರಕ್ಕೆ ಆಗಮಿಸಿದರು.
ಧನಂಜಯ ಅವರಿಗೆ ಅಭಿಮಾನಿಗಳಿಂದ ಅದ್ದೂರಿ ಸ್ವಾಗತ ಕಂಡು ಬಂದಿತು. ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿರುವ ಬಡವ ರಾಸ್ಕರ್ ಚಿತ್ರ ಇನ್ನೂ ಹೆಚ್ಚಿನ ಪ್ರದರ್ಶನಗೊಳ್ಳಲು ನೆರವಾಗುವ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸುವಂತೆ ಅಭಿಮಾನಿಗಳು ಹಾಗು ಸಾರ್ವಜನಿಕರಿಗೆ ನಟ ಧನಂಜಯ ಮನವಿ ಮಾಡಿದರು.
ಇದಕ್ಕೂ ಮೊದಲು ಚಿತ್ರಮಂದಿರದ ಮಾಲೀಕ ದುಷ್ಯಂತ್ ರಾಜ್ ಮತ್ತು ಸಿಬ್ಬಂದಿಗಳು ಧನಂಜಯ ಅವರನ್ನು ಪುಷ್ಪ ಮಾಲಿಕೆ ಮೂಲಕ ಸ್ವಾಗತಿಸಿದರು.
ಅಪ್ಪಾಜಿ ನಿವಾಸಕ್ಕೆ ಭೇಟಿ:
ನಟ ಧನಂಜಯ ನ್ಯೂಟೌನ್ ಉಂಬ್ಳೆಬೈಲು ರಸ್ತೆಯಲ್ಲಿರುವ ಮಾಜಿ ಶಾಸಕ ದಿವಂಗತ ಶಾಸಕ ಎಂ.ಜೆ ಅಪ್ಪಾಜಿ ನಿವಾಸಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅವರಿಗೆ ಅಭಿಮಾನಿಗಳು ಜೆಸಿಬಿ ಮೂಲಕ ಪುಷ್ಪ ಮಾಲೆ ಸಮರ್ಪಿಸಿದರು.
ಜೆಡಿಎಸ್ ಮುಖಂಡರಾ ಶಾರದ ಅಪ್ಪಾಜಿ, ಪುತ್ರ ಎಂ.ಎ ಅಜಿತ್ ಸೇರಿದಂತೆ ಕುಟುಂಬ ವರ್ಗದವರು ಧನಂಜಯ ಅವರಿಗೆ ಅದ್ದೂರಿ ಸ್ವಾಗತ ಕೋರಿದರು.
ಭದ್ರಾವತಿಗೆ ಭಾನುವಾರ ಆಗಮಿಸಿದ ಬಡವ ರಾಸ್ಕಲ್ ಚಿತ್ರದ ನಟ ಡಾಲಿ ಧನಂಜಯ ಅವರಿಗೆ ಅಭಿಮಾನಿಗಳು ಜೆಸಿಬಿ ಮೂಲಕ ಪುಷ್ಪ ಮಾಲೆ ಸಮರ್ಪಿಸಿದರು.
No comments:
Post a Comment