Monday, February 14, 2022

ಅಂತರಾಷ್ಟ್ರೀಯ ಯೋಗಪಟ್ಟು ಡಿ. ನಾಗರಾಜ್‌ಗೆ ರಾಜ್ಯಮಟ್ಟದ ಸಹೃದಯ ಯೋಗ ಶಿಕ್ಷಕ ಪ್ರಶಸ್ತಿ


ಯೋಗ ಭಂಗಿಯಲ್ಲಿ ಡಿ. ನಾಗರಾಜ್
    ಭದ್ರಾವತಿ, ಫೆ. ೧೪: ಸಾಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ೨೧ನೇ ವರ್ಷದ ಸಾಗರೋತ್ಸವ ಕಾರ್ಯಕ್ರಮದಲ್ಲಿ ನಗರದ ವಿವೇಕಾನಂದ ಯೋಗ ಕೇಂದ್ರದ ಅಧ್ಯಕ್ಷ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಂತರಾಷ್ಟ್ರೀಯ ಯೋಗಪಟು ಡಿ. ನಾಗರಾಜ್‌ರವರಿಗೆ ರಾಜ್ಯಮಟ್ಟದ ಸಹೃದಯ ಯೋಗ ಶಿಕ್ಷಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
    ಡಿ. ನಾಗರಾಜ್‌ರವರ ೪ ದಶಕಗಳ ಯೋಗ ಕ್ಷೇತ್ರದ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದ್ದು, ಪ್ರಶಸ್ತಿಯನ್ನು ಶಾಸಕ ಹರತಾಳು ಹಾಲಪ್ಪ ವಿತರಿಸಿದರು.
    ರಾಜಗುರು ಹಿರೇಮಠ ಕೆಳದಿ ಬಂದಗದ್ದೆಯ ಡಾ. ಮಹೇಶ್ವರ ಶಿವಚಾರ್ಯ ಸ್ವಾಮೀಜಿ ದಿವ್ಯ ಸಾನಿಧ್ಯವಹಿಸಿದ್ದರು. ಸಾಗರ ನಗರಸಭೆ ಅಧ್ಯಕ್ಷೆ ಮಧುರ ಶಿವಾನಂದ್, ಪೌರಾಯುಕ್ತ ರಾಜು ಡಿ. ಬಣಕಾರ್,  ಡಾ. ರಾಜನಂದಿನಿ ಕಾಗೋಡು, ಡಾ. ವೆಂಕಟೇಶ್ ಜೋಯ್ಸ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಹೃದಯ ಬಳಗದ ಅಧ್ಯಕ್ಷ ಜಿ. ನಾಗೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

No comments:

Post a Comment