ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆಯನ್ನು ಖಂಡಿಸಿ ಭದ್ರಾವತಿ ಶಿವಾಜಿ ವೃತ್ತದಲ್ಲಿ ಬುಧವಾರ ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆ ನಡೆಸುವ ಜೊತೆಗೆ ಸಂತಾಪ ಸೂಚಿಸಲಾಯಿತು.
ಭದ್ರಾವತಿ, ಫೆ. ೨೩: ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆಯನ್ನು ಖಂಡಿಸಿ ನಗರದಲ್ಲಿ ಬುಧವಾರ ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆ ನಡೆಸುವ ಜೊತೆಗೆ ಸಂತಾಪ ಸೂಚಿಸಲಾಯಿತು.
ನಗರದ ಹೊಸಮನೆ ಶಿವಾಜಿ ವೃತ್ತದಲ್ಲಿ ರಾಷ್ಟ್ರೀಯ ಬಜರಂಗದಳ, ಕೇಸರಿ ಪಡೆ, ಹಿಂದೂ ಕೋಟೆ ಮತ್ತು ರಾಮ್ ಸೇನೆ ವತಿಯಿಂದ ಬಜರಂಗದಳ ಕಾರ್ಯಕರ್ತ ಹರ್ಷ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಸಂತಾಪ ಸೂಚಿಸಲಾಯಿತು. ನಂತರ ಮಾತನಾಡಿದ ಪ್ರಮುಖರು ಹತ್ಯೆಯನ್ನು ತೀವ್ರವಾಗಿ ಖಂಡಿಸಿದರು.
ಹಿಂದೂಪರ ಸಂಘಟನೆಗಳಿಂದ ಪ್ರತಿಭಟನಾ ಮೆರವಣಿಗೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಇದಕ್ಕೆ ಪೊಲೀಸ್ ಇಲಾಖೆ ಅನುಮತಿ ನೀಡದ ಹಿನ್ನಲೆಯಲ್ಲಿ ಶಿವಾಜಿ ವೃತ್ತದಲ್ಲಿ ವೃತ್ತದಲ್ಲಿ ಕೇವಲ ಪ್ರತಿಭಟನೆ ನಡೆಸಲಾಯಿತು ಎಂದು ಸಂಘಟನೆಯ ಪ್ರಮುಖರು ಆರೋಪಿಸಿದ್ದಾರೆ.
ಪ್ರಮುಖರಾದ ಬಿ.ವಿ ಚಂದನ್‌ರಾವ್, ನವೀನ್, ಮನು ಗೌಡ, ಜೀವನ್, ಗಿರೀಶ್, ಮಂಜುನಾಥ್, ಕಿರಣ್, ಹಿಂದೂ ಕೋಟೆ ಮಂಜುನಾಥ್, ಉಮೇಶ್ ಗೌಡ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
No comments:
Post a Comment