ಭದ್ರಾವತಿ ಭಾರತೀಯ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಾರ್ಖಾನೆಯ ವಿಐಎಸ್‌ಎಲ್ ಆಸ್ಪತ್ರೆವತಿಯಿಂದ ಆಜಾದಿ ಕಾ ಅಮೃತ್ ಮಹೋತ್ಸವ ಅಂಗವಾಗಿ ಸಾಮಾಜಿಕ ಸಾಂಸ್ಥಿಕ ಹೊಣೆಗಾರಿಕೆಯಡಿ ತಾಲೂಕಿನ ದೊಡ್ಡೇರಿ ಮತ್ತು ಬದನೆಹಾಳ್ ಗ್ರಾಮಗಳಲ್ಲಿ ಆರೋಗ್ಯ ಶಿಬಿರ ಆಯೋಜಿಸಲಾಗಿತ್ತು.
ಭದ್ರಾವತಿ, ಮಾ. ೧೨: ಭಾರತೀಯ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಾರ್ಖಾನೆಯ ವಿಐಎಸ್‌ಎಲ್ ಆಸ್ಪತ್ರೆವತಿಯಿಂದ ಆಜಾದಿ ಕಾ ಅಮೃತ್ ಮಹೋತ್ಸವ ಅಂಗವಾಗಿ ಸಾಮಾಜಿಕ ಸಾಂಸ್ಥಿಕ ಹೊಣೆಗಾರಿಕೆಯಡಿ ತಾಲೂಕಿನ ದೊಡ್ಡೇರಿ ಮತ್ತು ಬದನೆಹಾಳ್ ಗ್ರಾಮಗಳಲ್ಲಿ ಆರೋಗ್ಯ ಶಿಬಿರ ಆಯೋಜಿಸಲಾಗಿತ್ತು.
ಕಾರ್ಯಪಾಲಕ ನಿರ್ದೇಶಕ ಸುರಜಿತ್ ಮಿಶ್ರ, ಮುಖ್ಯ ಮಹಾ ವ್ಯವಸ್ಥಾಪಕ(ಯೋಜನೆಗಳು) ಎ.ಬಿ. ಪವಾಡೆ, ಮುಖ್ಯ ಮಹಾ ವ್ಯವಸ್ಥಾಪಕ (ಕಾರ್ಯಾಚರಣೆ) ಕೆ.ಎಸ್. ಸುರೇಶ್, ಮುಖ್ಯ ವ್ಯವಸ್ಥಾಪಕ (ಸಿಬ್ಬಂದಿ ಮತ್ತು ಆಡಳಿತ) ಪಿ.ಪಿ. ಚಕ್ರಬರ್ತಿ, ಹೆಚ್ಚುವರಿ ಮುಖ್ಯ ವೈದ್ಯಾಧಿಕಾರಿ ಡಾ. ಎಮ್.ವೈ. ಸುರೇಶ್, ಸಹಾಯಕ ವ್ಯವಸ್ಥಾಪಕಿ (ಸಿಬ್ಬಂದಿ ಮತ್ತು ಸಿ.ಎಸ್.ಆರ್) ಕೆ.ಎಸ್. ಶೋಭ, ದೊಡ್ಡೇರಿ ಗ್ರಾಮಪಂಚಾಯತ್ ಅಧ್ಯಕ್ಷ ಆಗಾ ಶರೀಫ್, ಉಪಾಧ್ಯಕ್ಷೆ ಹೇಮಾವತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಶಿಬಿರದಲ್ಲಿ ವಿಐಎಸ್‌ಎಲ್ ಆಸ್ಪತ್ರೆಯ ಡಾ. ಸುಜೀತ್ ಕುಮಾರ್(ತಜ್ಞವೈಧ್ಯರು), ಡಾ. ಟಿ.ಎನ್. ಸುಷ್ಮಾ (ಸ್ತ್ರೀ ರೋಗ ತಜ್ಞೆ), ಡಾ. ಸುರೇಶ್. ಎಸ್.ಎನ್. (ದಂತ ವೈದ್ಯ) ಮತ್ತು ಅರೆ ವೈದ್ಯಕೀಯ ಸಿಬ್ಬಂದಿಗಳನ್ನೊಳಗೊಂಡ ತಂಡ ತಪಾಸಣೆ ನಡೆಸುವ ಜೊತೆಗೆ ಆರೋಗ್ಯ ಜಾಗೃತಿ ಮೂಡಿಸಿತು.
ಪಂಚಾಯತ್ ಆಭಿವೃದ್ಧಿ ಅಧಿಕಾರಿ ಶಿವಶಂಕರ್ ಸ್ವಾಗತಿಸಿದರು. ದೊಡ್ಡೇರಿ ಗ್ರಾಮದಲ್ಲಿ ೧೦೬ ಮತ್ತು ಬದನೆಹಾಳ್ ಗ್ರಾಮದಲ್ಲಿ ೧೦೦ ಮಂದಿ ಗ್ರಾಮಸ್ಥರು ಶಿಬಿರದ ಪ್ರಯೋಜನ ಪಡೆದುಕೊಂಡರು.
No comments:
Post a Comment