ಗುಡಿಸಲಿನಲ್ಲಿ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ೪ ಲಕ್ಷ ರು. ನಗದು ಹಾಗು ಚಿನ್ನಾಭರಣ ಮತ್ತು ಬಟ್ಟೆ, ಪಾತ್ರೆ ಸೇರಿದಂತೆ ದಿನಬಳಕೆ ವಸ್ತುಗಳು ಬೆಂಕಿಯಲ್ಲಿ ಸುಟ್ಟು ಭಸ್ಮವಾಗಿರುವ ಘಟನೆ ಭದ್ರಾವತಿ ತಾಲೂಕಿನ ಅಂತರಗಂಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಂಗನಾಥ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಭದ್ರಾವತಿ, ಮಾ. ೧೫: ಗುಡಿಸಲಿನಲ್ಲಿ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ೪ ಲಕ್ಷ ರು. ನಗದು ಹಾಗು ಚಿನ್ನಾಭರಣ ಮತ್ತು ಬಟ್ಟೆ, ಪಾತ್ರೆ ಸೇರಿದಂತೆ ದಿನಬಳಕೆ ವಸ್ತುಗಳು ಬೆಂಕಿಯಲ್ಲಿ ಸುಟ್ಟು ಭಸ್ಮವಾಗಿರುವ ಘಟನೆ ತಾಲೂಕಿನ ಅಂತರಗಂಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಂಗನಾಥ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಒಬ್ಬಂಟಿ ಮಹಿಳೆ ವಲದರಮದಿ ಎಂಬುವರಿಗೆ ಸೇರಿದ ವಾಸದ ಗುಡಿಸಲಿನಲ್ಲಿ ಈ ಘಟನೆ ನಡೆದಿದ್ದು, ಮನೆಯಲ್ಲಿ ಯಾರು ಇಲ್ಲದಿರುವಾಗ ಸಿಲಿಂಡರ್ ಸ್ಪೋಟಗೊಂಡಿದೆ. ಗುಡಿಸಲು ಸಂಪೂರ್ಣ ಸುಟ್ಟು ಹೋಗಿದ್ದು, ಬೀರುವಿನಲ್ಲಿಟ್ಟಿದ್ದ ೪ ಲಕ್ಷ ರು. ನಗದು, ೧ ತೊಲೆ ಬಂಗಾರ, ಬಟ್ಟೆ, ಪಾತ್ರೆ ಸೇರಿದಂತೆ ದಿನಬಳಕೆ ವಸ್ತುಗಳು ಸುಟ್ಟು ಹೋಗಿವೆ. ಇದರಿಂದಾಗಿ ಮಹಿಳೆ ಬದುಕು ಬೀದಿಗೆ ಬಿದ್ದಿದೆ.
ಅಗ್ನಿ ಶಾಮಕ ಠಾಣಾಧಿಕಾರಿ ಎನ್. ವಸಂತಕುಮಾರ್ ನೇತೃತ್ವದ ಸಿಬ್ಬಂದಿಗಳಾದ ಅಶೋಕ್‌ಕುಮಾರ್, ಸುರೇಶ್ ಆಚಾರ್, ವಿನೂತನ, ಕರಿಯಣ್ಣ, ಎಚ್. ಹರೀಶ್ ಮತ್ತು ಕೆ.ಎಚ್ ರಾಜಾ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ.
No comments:
Post a Comment