ಭದ್ರಾವತಿ ಸಮಗಾರ ಶ್ರೀ ಹರಳಯ್ಯ ಸಮಾಜದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಜ್ಯಮಟ್ಟದ ವಧು-ವರರ ಸಮಾವೇಶ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.
ಭದ್ರಾವತಿ, ಏ. ೧೨: ಸಮಗಾರ ಶ್ರೀ ಹರಳಯ್ಯ ಸಮಾಜದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಜ್ಯಮಟ್ಟದ ವಧು-ವರರ ಸಮಾವೇಶ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.
ತಾಲೂಕಿನಲ್ಲಿ ಸಮಗಾರ ಶ್ರೀ ಹರಳಯ್ಯ ಸಮಾಜ ಸುಮಾರು ೨೫೦೦ ಜನಸಂಖ್ಯೆಯನ್ನು ಹೊಂದಿದ್ದು, ಸಣ್ಣ ಸಮಾಜವಾಗಿದ್ದರೂ ಸಹ ಹೆಚ್ಚು ಸಂಘಟಿತವಾಗಿದೆ. ಮೊದಲ ಬಾರಿಗೆ ಹಳೇನಗರದ ಬಲಿಜ ಸಮಾಜದ ಎಂ.ಎಸ್ ರಾಮಯ್ಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಾವೇಶ ೧೦೦ಕ್ಕೂ ಹೆಚ್ಚು ಸಮಾಜ ಬಾಂಧವರಿಗೆ ವೇದಿಕೆಯಾಗಿ ರೂಪುಗೊಂಡಿತ್ತು. ಒಂದೆಡೆ ಸೇರುವ ಮೂಲಕ
ಸಮಗಾರ ಸಮಾಜದ ರಾಜ್ಯಾಧ್ಯಕ್ಷ ಜಗದೀಶ್ ಬೆಟಗೇರಿ, ಪರಶುರಾಮ್ ಅರಕೇರಿ, ದೇವರಾವ್ ಭಾಮ್ನೆ, ಸಂಗಮೇಶ್, ಭರತ್ ಉಳ್ಳಿಕಾಶಿ, ಮಂಜುನಾಥ್ ಹಂಜಗಿ, ಹೇಮರಾಜ್ ಲಕ್ಕುಂಡಿ, ವಿನಾಯಕ ಕಾನಡೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಸಮಗಾರ ಸಮಾಜದ ಅಧ್ಯಕ್ಷ ಬಿ. ಪಿ. ರಾಘವೇಂದ್ರ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು. ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಸಮಾಜ ಬಾಂಧವರು ಭಾಗವಹಿಸಿದ್ದರು.
No comments:
Post a Comment