ಭದ್ರಾವತಿ ನಗರಸಭೆ ವತಿಯಿಂದ ಹಳೇನಗರದ ಬಸವೇಶ್ವರ ವೃತ್ತದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ನಂದಿ ವಿಗ್ರಹವನ್ನು ಮಂಗಳವಾರ ತುಮಕೂರು ಸಿದ್ದಗಂಗಾಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಲೋಕಾರ್ಪಣೆಗೊಳಿಸಿದರು.
ಭದ್ರಾವತಿ, ಮೇ. ೨೪: ನಗರಸಭೆ ವತಿಯಿಂದ ಕೆಆರ್‌ಐಡಿಎಲ್ ಅನುದಾನದಲ್ಲಿ ಹಳೇನಗರದ ಬಸವೇಶ್ವರ ವೃತ್ತದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ನಂದಿ ವಿಗ್ರಹವನ್ನು ಮಂಗಳವಾರ ತುಮಕೂರು ಸಿದ್ದಗಂಗಾಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಲೋಕಾರ್ಪಣೆಗೊಳಿಸಿದರು.
ಲೋಕಾರ್ಪಣೆ ಅಂಗವಾಗಿ ಕಂಚಿನಬಾಗಿಲು ಕೋಟೆ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ಪವನ್‌ಕುಮಾರ್ ಉಡುಪ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಆಚರಣೆಗಳು ಜರುಗಿದವು. ಮಹಿಳಾ ಕಲಾವಿದರ ಡೊಳ್ಳು ಕುಣಿತ ಗಮನ ಸೆಳೆಯಿತು. ಕಾರ್ಯಕ್ರಮಕ್ಕೂ ಮೊದಲು ಶ್ರೀಗಳನ್ನು ನಾದಸ್ವರ, ಕುಂಭ ಕಲಶಗಳೊಂದಿಗೆ ಬರಮಾಡಿಕೊಳ್ಳಲಾಯಿತು.
ಪ್ರತಿಮೆ ವಿಶೇಷತೆ:
ಒಟ್ಟು ೨೨ ಲಕ್ಷ ರು. ವೆಚ್ಚದಲ್ಲಿ ನಂದಿ ಪ್ರತಿಮೆ ಹಾಗು ಮೇಲ್ಛಾವಣಿ ಕಾಮಗಾರಿ ಕೈಗೊಳ್ಳಲಾಗಿದೆ. ಪ್ರತಿಮೆ ೧೩.೫ ಅಡಿ ಎತ್ತರ ಹಾಗು ೨೪ ಅಡಿ ಉದ್ದ ವಿಸ್ತ್ರೀರ್ಣಹೊಂದಿದ್ದು, ಸೀಮೆಂಟ್ ಬಳಸಿ ಆಕರ್ಷಕವಾಗಿ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಕಾಗದನಗರದ ನಿವಾಸಿಗಳಾದ, ಶಿಲ್ಪಿಗಳಾದ ಎಸ್.ಬಿ ಬಾಲಾಜಿ ಮತ್ತು ವಿಷ್ಣುಕುಮಾರ್‌ರವರು ಈ ಪ್ರತಿಮೆ ನಿರ್ಮಿಸಿದ್ದಾರೆ.
ಸಂಸದ ಬಿ.ವೈ ರಾಘವೇಂದ್ರ, ಶಾಸಕ ಬಿ.ಕೆ ಸಂಗಮೇಶ್ವರ್, ವಿಧಾನಪರಿಷತ್ ಸದಸ್ಯ ಎಸ್. ರುದ್ರೇಗೌಡ, ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಉಪಾಧ್ಯಕ್ಷ ಚನ್ನಪ್ಪ, ಪೌರಾಯುಕ್ತ ಮನುಕುಮಾರ್ ಹಾಗು ಸದಸ್ಯರು, ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ಶಿಲ್ಪಿ ಹಾಗು ಗುತ್ತಿಗೆದಾರ ಎಸ್.ಬಿ ಬಾಲಾಜಿ, ವಿಷ್ಣುಕುಮಾರ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಗಣ್ಯರು ಉಪಸ್ಥಿತರಿದ್ದರು.
No comments:
Post a Comment