ರಾಜ್‌ಕುಮಾರ್
ಭದ್ರಾವತಿ, ಜೂ. ೨: ನಗರದ ಮೈಸೂರು ಕಾಗದ ಕಾರ್ಖಾನೆಯ ನಿವೃತ್ತ ಕಾರ್ಮಿಕ, ಹುಡ್ಕೋ ಕಾಲೋನಿ ನಿವಾಸಿ ರಾಜ್‌ಕುಮಾರ್(೬೫) ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ.
ಪತ್ನಿ, ಓರ್ವ ಪುತ್ರ ಹಾಗು ಓರ್ವ ಪುತ್ರಿ ಇದ್ದರು. ನಗರದ ಉಜ್ಜನಿಪುರ ಎನ್.ಎಚ್-೬೯ ಬೈಪಾಸ್ ರಸ್ತೆಯ ಶಂಕರಪ್ಪ ಕೆರೆ ಬಳಿ ರಾಜ್‌ಕುಮಾರ್‌ರವರು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದ್ದು, ತೀವ್ರಗಾಯಗೊಂಡ ಹಿನ್ನಲೆಯಲ್ಲಿ ಮೃತಪಟ್ಟಿದ್ದಾರೆ. ಈ ಸಂಬಂಧ ಕಾಗದನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರ ನಿಧನಕ್ಕೆ ನಗರದ ಅನೇಕ ಗಣ್ಯರು, ವಿವಿಧ ಸಂಘ-ಸಂಸ್ಥೆಗಳು ಸಂತಾಪ ಸೂಚಿಸಿವೆ.
Pray for the departed Soul
ReplyDeleteK M Satheesh