Friday, July 8, 2022

ಬಿಳಿಕಿ ಶ್ರೀಗಳಿಂದ ಸಂಸದರಿಗೆ ಗುರುರಕ್ಷೆ

ಭದ್ರಾವತಿ ತಾಲೂಕಿನ ಬಿಳಿಕಿ ಶ್ರೀ ಹಿರೇಮಠಕ್ಕೆ ಸಂಸದ ಬಿ.ವೈ ರಾಘವೇಂದ್ರ ಶುಕ್ರವಾರ ಭೇಟಿ ನೀಡಿ ಶ್ರೀ ಮಠದ ಪೀಠಾಧಿಪತಿಗಳಿಂದ ಗುರುರಕ್ಷೆ ಸ್ವೀಕರಿಸಿದರು.
    ಭದ್ರಾವತಿ, ಜು. ೮: ತಾಲೂಕಿನ ಬಿಳಿಕಿ ಶ್ರೀ ಹಿರೇಮಠಕ್ಕೆ ಸಂಸದ ಬಿ.ವೈ ರಾಘವೇಂದ್ರ ಶುಕ್ರವಾರ ಭೇಟಿ ನೀಡಿ ಶ್ರೀ ಮಠದ ಪೀಠಾಧಿಪತಿಗಳಿಂದ ಗುರುರಕ್ಷೆ ಸ್ವೀಕರಿಸಿದರು.
      ತಾಲೂಕಿನ ವಿವಿಧೆಡೆ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದ ಸಂಸದರು ಸಂಜೆ ಬಿಳಿಕಿ ಶ್ರೀ ಹಿರೇಮಠಕ್ಕೆ ತೆರಳಿ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಗಳಿಂದ ಗುರುರಕ್ಷೆ ಸ್ವೀಕರಿಸಿ ಶ್ರೀ ಮಠದ ಬೆಳವಣಿಗೆಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
      ಬಿಜೆಪಿ ತಾಲೂಕು ಮಂಡಲ ನಿಯೋಜಿದ ಅಧ್ಯಕ್ಷ ಜಿ. ಧರ್ಮಪ್ರಸಾದ್, ಕರ್ನಾಟಕ ನೀರು ಸರಬರಾಜು ಹಾಗು ಒಳಚರಂಡಿ ಮಂಡಳಿ ನಿರ್ದೇಶಕ ಮಂಗೋಟೆ ರುದ್ರೇಶ್, ಭೋವಿ ನಿಗಮದ ಸದಸ್ಯ ಜಿ. ಆನಂದಕುಮಾರ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಕೆ ಶ್ರೀನಾಥ್, ಎಂ. ಪ್ರಭಾಕರ್, ಕೆ. ಮಂಜುನಾಥ್, ಬಿಳಿಕಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಾಪಿಬಾಯಿ, ಸದಸ್ಯ ಶಿವಕುಮಾರ್, ವಸಂತ್, ಚಿದಾನಂದ ಸ್ವಾಮಿ, ದೂದಾನಾಯ್ಕ, ಕೆಎಸ್‌ಆರ್‌ಟಿಸಿ ಸತೀಶ್, ಎಚ್. ಮಂಜುನಾಥ್, ರಮೇಶ್, ರೂಪಾ ನಾಗರಾಜ್, ಆನಂದ್, ಮಹಾದೇವ ಸೇರಿದಂತೆ ಶ್ರೀ ಮಠದ ಭಕ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು.

No comments:

Post a Comment