ಭದ್ರಾವತಿ ನಗರಸಭೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಹಾಗು ನೀರು ಸರಬರಾಜು ಕಾರ್ಮಿಕರಿಗೆ ಪ್ರತಿ ವರ್ಷದಂತೆ ಈ ಬಾರಿ ಸಹ ಬುಧವಾರ ಮಳೆಗಾಲದಲ್ಲಿ ಅನುಕೂಲವಾಗುವಂತೆ ಜರ್ಕೀನ್ ವಿತರಿಸಲಾಯಿತು.
ಭದ್ರಾವತಿ, ಜು. ೬: ಪ್ರತಿ ವರ್ಷದಂತೆ ಈ ಬಾರಿ ಸಹ ನಗರಸಭೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಹಾಗು ನೀರು ಸರಬರಾಜು ಕಾರ್ಮಿಕರಿಗೆ ಬುಧವಾರ ಮಳೆಗಾಲದಲ್ಲಿ ಅನುಕೂಲವಾಗುವಂತೆ ಜರ್ಕೀನ್ ವಿತರಿಸಲಾಯಿತು.
ಕಾಯಂ ಹಾಗು ಗುತ್ತಿಗೆ ಒಟ್ಟು ೨೭೫ ಪೌರಕಾರ್ಮಿಕರಿಗೆ ಹಾಗು ೬೫ ನೀರು ಸರಬರಾಜು ಕಾರ್ಮಿಕರಿಗೆ ಜರ್ಕೀನ್ ವಿತರಿಸಲಾಯಿತು. ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ಸದಸ್ಯರಾದ ಲತಾ ಚಂದ್ರಶೇಖರ್, ಆರ್. ಶ್ರೇಯಸ್, ಕಾಂತರಾಜ್, ಪೌರಾಯುಕ್ತ ಮನುಕುಮಾರ್, ಅಧಿಕಾರಿಗಳಾದ ಎಸ್.ಆರ್ ಸತೀಶ್, ಆರ್.ಬಿ ಸತೀಶ್, ಹೊರಗುತ್ತಿಗೆ ಪೌರನೌಕರರ ಸಂಘದ ಜಿಲ್ಲಾಧ್ಯಕ್ಷ ಮಹಮದ್ ಗೌಸ್, ಪೌರಕಾರ್ಮಿಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment